Asia Cup ಗೆಲ್ಲಲು ಪಾಕ್ ಗೆ 171 ರನ್ ಗುರಿ ನೀಡಿದ ಲಂಕಾ
ಏಷ್ಯಾ ಕಪ್ (Asia Cup) ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶ್ರೀಲಂಕಾ (Sri Lanka), ಟ್ರೋಫಿ ಗೆಲ್ಲಲು ಪಾಕಿಸ್ತಾನ (Pakistan) ತಂಡಕ್ಕೆ 171 ರನ್ ಗಳ ಗುರಿಯನ್ನು ನೀಡಿದೆ.
ಶ್ರೀಲಂಕಾ ತಂಡದ ಪತುನ ನಿಸ್ಸಾಂಕ (8), ಕುಸಾಲ್ ಮೆಂಡಿಸ್ (0) ಮಹತ್ವದ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ದನುಶಕ ಗುಣತಿಲಕ (1) ಸಹ ಹಾರೀಸ್ ರೌಫ್ ತೋಡಿದ ಖೆಡ್ಡಾಗೆ ಬಲಿಯಾದರು.

ಮಧ್ಯಮ ಕ್ರಮಾಂಕದಲ್ಲಿ ಧನಂಜಯ್ ಡಿ ಸಿಲ್ವಾ 21 ಎಸೆತಗಳಲ್ಲಿ 28 ರನ್ ಬಾರಿಸಿ ನಾಲ್ಕನೇ ವಿಕೆಟ್ ರೂಪದಲ್ಲಿ ಔಟ್ ಆದರು. ದಸುನ್ ಶನಕ (2) ಸಹ ಬೇಗನೆ ವಿಕೆಟ್ ಒಪ್ಪಿಸಿದರು.

58 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಬಾನುಕ ರಾಜಪಕ್ಸೆ (Bhanuka Rajapaksa) ಹಾಗೂ ವನಿಂದು ಹಸರಂಗ ತಂಡಕ್ಕೆ ಕೊಂಚ ಆಧಾರವಾದರು. ಈ ಜೋಡಿ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಿತು. ಈ ಜೋಡಿ 36 ಎಸೆತಗಳಲ್ಲಿ 58 ರನ್ ಬಾರಿಸಿದರು. ವನಿಂದು ಹಸರಂಗ 21 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಸಿಡಿಸಿದರು.

ಚಮಿಕ ಕರುಣರತ್ನೆ (14) ಹಾಗೂ ಬಾನುಕ ರಾಜಪಕ್ಸೆ ಜೋಡಿ 31 ಎಸೆತಗಳಲ್ಲಿ 54 ರನ್ ಜೋಡಿಸಿದರು. ಬಾನುಕ ರಾಜಪಕ್ಸೆ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಯಾದಿಂದ ಅಜೇಯ 71 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಶ್ರೀಲಂಕಾ 20 ಓವರ್ ಗಳಲ್ಲಿ 6 ವಿಕೆಟ್ ಗೆ 170 ರನ್ ಸೇರಿಸಿತು. ಪಾಕ್ ಪರ ಹಾರೀಸ್ ರೌಫ್ 29 ರನ್ ನೀಡಿ ಮೂರು ವಿಕೆಟ್ ಪಡೆದರು.
Asia Cup, Pakistan, Sri Lanka, Final, Trophy