Asia Cup Women Hockey – ಕೋರಿಯಾ ವಿರುದ್ದ ಸೋತ ಭಾರತ ತಂಡದ ಕನಸು ಭಗ್ನ,,!
ಏಷ್ಯಾಕಪ್ ಹಾಕಿ ಪ್ರಶಸ್ತಿಯನ್ನು ಗೆಲ್ಲುವ ಭಾರತ ಮಹಿಳಾ ತಂಡದ ಕನಸು ಭಗ್ನಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-3ರಿಂದ ಕೊರಿಯಾ ವಿರುದ್ಧ ಸೋಲು ಅನುಭವಿಸಿದೆ.
ಪಂದ್ಯದ ಆರಂಭದಲ್ಲಿ ಭಾರತ ಮಹಿಳಾ ಆಟಗಾರ್ತಿಯರು ಮೇಲುಗೈ ಸಾಧಿಸಿದ್ರು. ಪಂದ್ಯದ 28ನೇ ನಿಮಿಷದಲ್ಲಿ ಭಾರತದ ವಂದನಾ ಕಟಾರಿಯಾ ಅವರು ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದ್ರು.
Asia Cup women Hockey 2022: India’s title hopes dashed after losing 2-3 to Korea in semifinal
ಆದ್ರೆ ನಂತರ ಕೊರಿಯಾ ತಂಡ ಆಕ್ರಮಣಕಾರಿ ಆಟವನ್ನಾಡಿತ್ತು. ಅಲ್ಲದೆ ಭಾರತ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಮೂರು ಗೋಲುಗಳನ್ನು ದಾಖಲಿಸಿತ್ತು.
ಕೊರಿಯಾ ತಂಡದ ಪರ ನಾಯಕಿ ಎನುಬಿ ಚೆನ್ 31ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು ಸಮಗೊಳಿಸಿದ್ರು. ಬಳಿಕ ಸ್ಯೆಂಗ್ ಜು ಲೀ 45ನೇ ನಿಮಿಷ ಹಾಗೂ ಹೈಜಿನ್ ಚೊ 47ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು 3-1ಕ್ಕೇರಿಸಿಕೊಂಡ್ರು. ಅಂತಿಮವಾಗಿ ಭಾರತ ತಂಡ 2-3ರಿಂದ ಕೊರಿಯಾ ತಂಡಕ್ಕೆ ಶರಣಾಯ್ತು.
ಭಾರತ ಮಹಿಳಾ ತಂಡ ಈಗ ಮೂರನೇ ಸ್ಥಾನಕ್ಕೆ ಸ್ಪರ್ಧೆ ನಡೆಸಲಿದೆ. ಚೀನಾ ಮತ್ತು ಜಪಾನ್ ನಡುವಿನ ಪಂದ್ಯದಲ್ಲಿ ಸೋತ ತಂಡದ ಎದುರು ಭಾರತ ಮಹಿಳಾ ತಂಡ ಆಡಲಿದೆ.