ಮುಂಬೈ ಇಂಡಿಯನ್ಸ್ ಐಪಿಎಲ್ ನ ಯಶಸ್ವಿ ತಂಡ. ಆದರೆ ಈ ಬಾರಿ ತಂಡದ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆಡಿದ ಐದೂ ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ ಹೊಸ ಪ್ಲಾನ್ ಮಾಡಿಕೊಳ್ಳುತ್ತಿದೆ. ಆಟಗಾರರು ರಣ ತಂತ್ರದತ್ತ ಚಿತ್ತ ನೆಟ್ಟಿದ್ದರೆ ಅವರ ಗೆಳತಿಯರು ಸಮಾಜಿಕ ತಾಣದಲ್ಲಿ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ಹಾಗೂ ದೇವಿಶ ಶೆಟ್ಟಿ ಕಾಲೇಜಿನಲ್ಲಿ ಭೇಟಿಯಾದರು. ಸೂರ್ಯಕುಮಾರ್ ಅವರ ಭರ್ಜರಿ ಬ್ಯಾಟಿಂಗ್ ಗೆ ದೇವಿಶ ಫುಲ್ ಬೋಲ್ಡ್ ಆದರು. ಇಬ್ಬರೂ 2016ರಲ್ಲಿ ಸಪ್ತ ಪದಿ ತುಳಿದರು. ವಾಸ್ತವಾಗಿ ದೇವಿಶ ಡ್ಯಾನ್ಸ್ ಕೋಚ್. ಇವರನ್ನು ಯಾವಾಗಲು ಮೈದಾನದಲ್ಲಿ ತಮ್ಮ ಪತಿಗೆ ಚಿಯರ್ ಮಾಡುವಾಗ ನೋಡಬಹುದು.
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗರ ಕಿರನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡದ ಭರವಸೆಯ ಆಲ್ ರೌಂಡರ್. 2012ರಲ್ಲಿ ಕಿರನ್ ಜೆನಾ ಅಲಿ ಅವರೊಂದಿಗೆ ಮದುವೆ ಆದರು. ಜೆನಾ ಕ್ರೀಡಾ ಪರಿಕರಗಳ ಬ್ರಾಂಡ್ ನೋಡಿಕೊಳ್ಳುತ್ತಾರೆ. ಕಿರನ್ ಹಾಗೂ ಜೇನಾ ಏಳು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಮದುವೆಗೂ ಮುನ್ನವೇ ಕೆಡೆನ್ ಪೊಲಾರ್ಡ್ ಜನಿಸಿದ್ದರು.
2008ರಲ್ಲಿ ರೋಹಿತ್ ಶರ್ಮಾ ಹಾಗೂ ರಿತಿಕಾ ಮೊದಲ ಬಾರಿಗೆ ಭೇಟಿ ಆದರು. ರಿತಿಕಾ ಕಾರ್ನರ್ಸ್ಟೋರ್ ಕಂಪನಿಯಲ್ಲಿ ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. 2015ರಲ್ಲಿ ಮದುವೆಯಾಗುವ ಮುನ್ನವೇ ಇಬ್ಬರೂ ಆರು ವರ್ಷ ಡೇಟಿಂಗ್ ನಲ್ಲಿದ್ದರು. ರಿತಿಕಾ ಮೈದಾನದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇವರು ರೋಹಿತ್ ಅವರೊಂದಿಗೆ ವಿದೇಶಿ ಪ್ರವಾಸ ಬೆಳೆಸುತ್ತಾರೆ.
ಇಶಾನ್ ಕಿಶನ್ ಅವರ ಗೆಳತಿ ಅದಿತಿ ಹುಂಡಿಯಾ ಕೂಡ ಕೆಲವೊಮ್ಮೆ MI ನ ನೀಲಿ ಜರ್ಸಿಯನ್ನು ಧರಿಸಿ ಇಶಾನ್ ಕಿಶನ್ ಅನ್ನು ಬೆಂಬಲಿಸುತ್ತಾರೆ. ಐಪಿಎಲ್ 2022 ರ ಮೆಗಾ ಹರಾಜಿನ ಸಮಯದಲ್ಲಿ, ಇಶಾನ್ ಕಿಶನ್ ಅವರನ್ನು ಭಾರಿ ಬೆಲೆಗೆ ಖರೀದಿಸಲಾಗಿತ್ತು. ಇದನ್ನು ಅದಿತಿ ಪೋಸ್ಟ್ ಮಾಡಿದ್ದರು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ, ಇಬ್ಬರೂ ಪರಸ್ಪರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಕಾಮೆಂಟ್ ಮಾಡುವುದನ್ನು ಕಾಣಬಹುದು. ಅದಿತಿ ಹುಂಡಿಯವರು ವೃತ್ತಿಯಲ್ಲಿ ಮಾಡೆಲ್.
ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ ಇಬ್ಬರೂ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಪರಸ್ಪರ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಜಸ್ಪ್ರೀತ್ ಬುಮ್ರಾ ಅವರ ಪಂದ್ಯದ ಸಮಯದಲ್ಲಿ ಸಂಜನಾ ಗಣೇಶನ್ ಅವರು ಕ್ರಿಕೆಟ್ ಸ್ಟೇಡಿಯಂನಲ್ಲಿ ಆಗಾಗ್ಗೆ ಅವರನ್ನು ಹುರಿದುಂಬಿಸುತ್ತಾರೆ. ಜಸ್ಪ್ರೀತ್ ಬುಮ್ರಾ ಅವರು 2021 ರಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರೊಂದಿಗೆ ಮದುವೆ ಆದರು. 2019 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು.