ಫೈನಲ್ಗೆ ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟಿನಾ ತಂಡ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಅರ್ಜೆಂಟಿನಾ ವಿಶ್ವಕಪ್ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ.
ಮಂಗಳವಾರ ತಡ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ಕ್ರೊವೇಷಿಯಾ ತಂಡವನ್ನು 3-0 ಗೋಲುಗಳಿಂದ ಮಣಿಸಿತು.
ಭಾನುವಾರ ನಡೆಯುವ ಫೈನಲ್ನಲ್ಲಿ ಮೆಸ್ಸಿ ಬಳಗ ಹಾಲಿ ಚಾಂಪಿಯನ್ ಫ್ರಾನ್ಸ್ ಅಥವಾ ಮೊರಾಕ್ಕೊ ತಂಡವನ್ನು ಎದುರಿಸಲಿದೆ.
ಮೊದಲ ಅವಧಿಯಲ್ಲಿ ಗೋಲು ಹೊಡೆಯಲು ಪ್ರಯತ್ನಿಸಿದ ಕ್ರೊವೇಷಿಯಾ ದಾಳಿಯನ್ನು ಮೆಸ್ಸಿ ಬಳಗ ವಿಫಲಗೊಳಿಸಿತು.
34ನೇ ನಿಮಿಷದಲ್ಲಿ ಅರ್ಜೆಂಟಿನಾ ಪೆನಾಲ್ಟಿ ಅವಕಾಶ ಪಡೆಯಿತು.ಈ ಅವಕಾಶವನ್ನು ಲಿಯೊನೆಲ್ ಮೆಸ್ಸಿ ಗೋಲಾನ್ನಾಗಿ ಪರಿವರ್ತಿಸಿದರು.
ಇದಾದ ಅಲ್ವೆರೇಜ್ 39ನೇ ನಿಮಿಷದಲ್ಲಿ ಗೋಲು ಹೊಡೆದರು. ಇದರೊಂದಿಗೆ ಮೊದಲ ಅವಧಿಯಲ್ಲಿ ಅರ್ಜೆಂಟಿನಾ 2-0 ಮುನ್ನಡೆಪಡೆಯಿತು.
ಎರಡನೆ ಅವಧಿಯಲ್ಲೂ ಅರ್ಜೆಂಟಿನಾ ಬಲಿಷ್ಠವಾಗಿ ಕಂಡುಬಂತು.ಅಲ್ವರೇಜ್ ಅವಕಾಶವನ್ನು ಮತ್ತೆ ಸೃಷ್ಟಿಸಿ 69ನೇ ನಿಮಿಷದಲ್ಲಿ ಗೋಲು ಹೊಡೆದರು. ಅರ್ಜೆಂಟಿನಾದ ಆಟದೆದುರು ಕ್ರೊವೇಷಿಯಾ ಮಂಕಾಯಿತು.
ಅರ್ಜೆಂಟಿನಾ ಗೆಲುವಿನಲ್ಲಿ ಮೆಸ್ಸಿ ಪ್ರಮುಖಪಾತ್ರನಿರ್ವಹಿಸುತ್ತಿದ್ದಾರೆ. ಗೆಲುವಿನ ಕಳೆದ ಮೂರು ಪಂದ್ಯಗಳಿಂದ ಲಿಯೊನೆಲ್ ಮೆಸ್ಸಿ 3 ಗೋಲು ಹೊಡೆದಿದ್ದಾರೆ.