ಫಿಫಾ ವಿಶ್ವಕಪ್ನನಲ್ಲಿ ಬಲಿಷ್ಠ ಅರ್ಜೆಂಟಿನಾ ತಂಡ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ಕತಾರ್ ನ ಲೂಸೇಲ್ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಅರ್ಜೆಂಟಿನಾ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳಿಂದ ಸೋಲಿಸಿತು.
ಇದರೊಂದಿಗೆ ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟಿನಾ ಮೂರನೆ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.ಸತತ ಎರಡನೆ ಬಾರಿ ಪ್ರಶಸ್ತಿ ಗೆಲ್ಲುವ ಫ್ರಾನ್ಸ್ ಕನಸು ಭಗ್ನಗೊಂಡಿತು.
ನಿಗದಿತ ಸಮಯದಲ್ಲಿ ಎರಡೂ 3-3 ತಂಡಗಳು ಗೋಲು ಹೊಡೆದು ಸಮಗೊಳಿಸಿದವು.
ಅರ್ಜೆಂಟಿನಾ ಪರ ಮೆಸ್ಸಿ 23ನೇ ನಿಮಿಷದಲ್ಲಿ ನಿರಾಯಾಸವಾಗಿ ಗೋಲು ಹೊಡೆದರು. 36ನೇ ನಿಮಷದಲ್ಲಿ ಚಾಕಚಕ್ಯತೆಯಿಂದ ಮೆಸ್ಸಿ ನೀಡಿದ ಪಾಸನ್ನು ಎಂಜಕ್ ಮರಿಯಾ
ಗೋಲು ಹೊಡೆದರು.
ಮೊದಲ ಅವಧಿಯಲ್ಲಿ ಅರ್ಜೆಂಟಿನಾ 2-0 ಗೋಲುಗಳಿಂದ ಮುನ್ನಡೆ ಪಡೆಯಿತು.
ನಿರ್ಣಾಯಕ ಎರಡನೆ ಅವಧಿಯಲ್ಲಿ ಫ್ರಾನ್ಸ್ ತಂಡ 73ನೇ ನಿಮಿಷಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು.
80 ನಿಮಿಷದವರೆಗೆ ನಿಯಂತ್ರಣ ಸಾಧಿಸಿದ ಅರ್ಜೆಂಟಿನಾ ಡಬಲ್ ಶಾಕ್ ಅನುಭವಿಸಿತು.
97 ಸೆಕೆಂಡ್ಗಳ ಅಂತರದಲ್ಲಿ ಫ್ರಾನ್ಸ್ ತಂಡದ ತಾರಾ ಆಟಗಾರ ಎಂಬಾಪೆ 2ಗೋಲು ಹೊಡೆದರು.
ಹೆಚ್ಚುವರಿ ನಿಮಿಷದಲ್ಲಿ ಎಂಬಾಪೆ ಮತ್ತು ಮೆಸ್ಸಿ ಗೋಲು ಹೊಡೆದು ಸಮಗೊಳಿಸಿದರು.
ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಅರ್ಜೆಂಟಿನಾ ಪರ ಮೆಸ್ಸಿ ಗೋಲು ಬಾರಿಸಿದರು. ಫ್ರಾನ್ಸ್ ಪರ ಎಂಬಾಪೆ ಗೋಲು ಹೊಡೆದರು. ನಂತರ ಫ್ರಾನ್ಸ್ ಪರ ಕಿಂಗ್ಸ್ ಲೆ ಕೊಮನ್ ಹಾಗೂ ಆಲುರಿಯನ್ ಮಿಸ್ ಮಾಡಿದರು.
ಅರ್ಜೆಂಟಿನಾ ಪರ ಪೌಲೊ ದ್ಯಾಬಾಲ, ಲಿಯಾಂಡ್ರೊ, ಪಾರೆಡೆಸ್, ಗೊಂಜಾಲೊ ಮಾಂಟಿಯಲ್ ಗೋಲು ಬಾರಿಸಿ ಅರ್ಜೆಂಟಿನಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.