ಭಾರೀ ಜನ ಸಾಗರ ಸೇರಿದ್ದರಿಂದ ವಿಶ್ವ ಚಾಂಪಿಯನ್ ಅರ್ಜೆಂಟಿನಾ ತಂಡವನ್ನು ಏರ್ಲಿಫ್ಟ್ ಮಾಡಲಾಗಿದೆ.
ವಿಜಯಯಾತ್ರೆ ಹಿನ್ನೆಲೆಯಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಬಸ್ನಲ್ಲಿ ಒಬೆಲಿಸ್ಕೊ ತೆರೆಳುತ್ತಿತ್ತು. ಆದರೆ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ಸಾಗರದಂತೆ ಬಂದಿದ್ದರಿಂದ ಮೆಸ್ಸಿ ಪಡೆಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅರ್ಜೆಂಟಿನಾ ಫುಟ್ಬಾಲ್ ತಂಡವನ್ನು ಏರ್ ಲಿಫ್ಟ್ ಮಾಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
ತೆರೆದ ವಾಹನದಲ್ಲಿ ವಿಜಯಯಾತ್ರೆ
ಇದಕ್ಕೂ ಮುನ್ನ ವಿಶ್ವ ಚಾಂಪಿಯನ್ ಅರ್ಜೆಂಟಿನಾ ಮಂಗಳವಾರ ತಡ ರಾತ್ರಿ ತಂಡಕ್ಕೆ ತವರಿಗೆ ಬಂದಾಗ ಭರ್ಜರಿ ಸ್ವಾಗತ ಸಿಕ್ಕಿತ್ತು.
ರಾಜಧಾನಿ ಬ್ಯೂಸನ್ ಐರಿಸ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡಕ್ಕೆ ಕೆಂಪು ಹೊದಿಕೆ ಹಾಸಿ ಸ್ವಾಗತಿಸಲಾಯಿತು.
ನಂತರ ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರ ನಡುವೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆರೆಳಿದರು. ಬ್ಯೂನಸ್ ಐರಿಸ್ನ ಪ್ರಮುಖ ಬೀದಿಗಳಲ್ಲಿ ವಿಜಯಯಾತ್ರೆಯನ್ನು ಮಾಡಿದರು.