ಭಾರತದ ತಾರಾ ಶಟ್ಲರ್ಗಳಾದ ತೀಸ್ರಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸತತ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇದೊಂದು ವಿಭಾಗ ಹೊರತುಪಡಿಸಿ ನಾಲ್ಕು ವಿಭಾಗಗಳು ಸೋಲು ಕಂಡಿವೆ. ಕಳೆದ ವರ್ಷ ಈ ಜೋಡಿ ಸೆಮಿಸ್ನಲ್ಲಿ ಸೋತಿತ್ತು. ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಶುಕ್ರವಾರ ನಡೆದ ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಜೋಡಿ ಚೀನಾದ ಲೀವೆನ್ ಮೆಯ್ ಲಿಯು ಕ್ವಾನ್ ಜೋಡಿ ವಿರುದ್ಧ 21-14, 18-1, 21-12 ಗೆಲುವು ಸಾಧಿಸಿತು.
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್ನಲ್ಲಿ ಕಿದಂಬಿ ಶ್ರೀಕಾಂತ್ ಜಪಾನ್ ಕಡಾಯಿ ನರೋಕಾ ವಿರುದ್ಧ 17-21 ಅಂಕಗಳಿಂದ ಸೋತರು.
ಎಚ್.ಎಸ್.ಪ್ರಣಯ್ ಇಂಡೋನೇಷ್ಯಾದ ಆ್ಯಂಟಿ ಗಿಂಟಿಂಗ್ ವಿರುದ್ಧ 20-22, 21-15, 17-21 ಅಂಕಗಳಿಂದ ಮಣಿದರು.