ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ,ಸಿಂಧು ಆಲ್ ಇಂಗ್ಲೆಂಡ್ ಮೊದಲ ಸೋತು ಟೂರ್ನಿಯಿಂದ ಹೊರಬಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಚೀನಾದ ಜಾಂಗ್ ಯೂ ಮಾನ್ ವಿರುದ್ಧ 39 ನಿಮಿಷಗಳ ಕಾಲ ಹೋರಾಡಿ 17-21, 11-21ಅಂಕಗಳಿಂದ ಗೆದ್ದರು.
ಇಡೀ ಪಂದ್ಯದುದಕ್ಕೂ ಸಿಂಧು ಹಿನ್ನಡೆ ಅನುಭವಿಸುತ್ತಾ ಸಾಗಿದರು. ಎದುರಾಳಿ ಆಟಗಾರ್ತಿ ಜಾಂಗ್ ಯೂ ಮಾನ್ ಚುರುಕುತನ ಮತ್ತು ಆಕ್ರಮಣಕಾರಿ ಆಟವಾಡಿದರು.
ಸಿಂಧು ಮೊದಲ ಸುತ್ತಿನಲ್ಲಿ 6-5 ಅಂಕಗಳಿಂದ ಮುನ್ನಡೆ ಪಡೆದರು. ನಂತರ 16-13 ಅಂಕಗಳಿಂದ ಮುನ್ನಡೆ ಪಡೆದರು. ಚೀನಾ ಆಟಗಾರ್ತಿ ಎಚ್ಚೆತ್ತು ಆಡಿ ನೇರವಾಗಿ 7 ಅಂಕ ಪಡೆದು 20-16 ಅಂಕ ಪಡೆದರು.
ಎರಡನೆ ಸೆಟ್‍ನಲ್ಲಿ 5-5 ಅಂಕಗಳಿಂದ ಸಮಬಲ ಹೋರಾಟ ಕಂಡುಬಂತು. ಸಿಂಧು ಅನಗತ್ಯ ತಪ್ಪು ಮಾಡಿದ್ದರಿಂದ 5-10 ಅಂಕಗಳ ಹಿನ್ನಡೆ ಅನುಭವಿಸ ಬೇಕಾಯಿತು.
ಮರು ಹೋರಾಟ ನೀಡಿದ ಸಿಂಧು 7-11 ಅಂಕಗಳಾಗಿ ಪರಿವರ್ತಿಸಿದರು. ಆದರೆ ನಂತರ 9-16 ಅಂಕಗಳ ಹಿನ್ನಡೆ ಅನುಭವಿಸಿ ಎರಡನೆ ಪಂದ್ಯವನ್ನು ಕೈಚೆಲ್ಲಿದರು.
ಈ ವರ್ಷ ಸಿಂಧು ಮೂರನೆ ಬಾರಿ ಮೊದಲ ಸುತ್ತಿನಲ್ಲೆ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಕಾರೊಲಿನ್ ಮರಿನ್ ವಿರುದ್ಧ ಮೊದಲ ಸುತ್ತಿನಲ್ಲಿ ಸೋತಿದ್ದರು.
ತಮ್ಮ ಕೋಚ್ ಪಾರ್ಕ್ ಟಾ ಸಾಂಗ್ ಅವರಿಂದ ಬೇರ್ಪಟ್ಟಿದ್ದರು. ಅವರ ತರಬೇತಿಯಲ್ಲಿ ಸಿಂಧು ಟೊಕಿಯೊ ಒಲಿಂಪಿಕ್ಸ್‍ನಲ್ಲಿ ಕಂಚು ಗೆದ್ದಿದ್ದರು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಟ್ರೆಸ್ಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಏಳನೆ ಶ್ರೇಯಾಂಕಿತ ಜೋಡಿ ಥಾಯ್‍ಲೆಂಡ್‍ನ ಜಾಂಗ್‍ಕೊಲ್ಪಾನ್ ಕಿಟ್ಟಿಹಾರಾಕುಲ್ ಹಾಗೂ ರವಿಂದಾ ಪ್ರಜೊಗ್ಜಿಯ್ ವಿರುದ್ಧ 21-18, 21-14 ಅಂಕಗಳಿಂದ ಗೆದ್ದರು.
ಪ್ರೀ ಕ್ವಾರ್ಟರ್‍ನಲ್ಲಿ ಜಪಾನ್ ತಂಡದ ಯೂಕಿ ಶಿಮಾ ಮತ್ತು ಸಾಯಾಕಾ ಹಿರೊಟಾ ಜೋಡಿಯನ್ನು ಎದುರಿಸಲಿದ್ದಾರೆ.