ಆಂಗ್ಲರ ನಾಡಲ್ಲಿ ಇಂದಿನಿಂದ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಆರಂಭವಾಗಲಿದೆ.
ಗಾಯದ ಸಮಸ್ಯೆ ಮತ್ತು ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಭಾರತೀಯ ಶಟ್ಲರ್‍ಗಳು ಪದಕದ ಬರವನ್ನು ನೀಗಿಸಬೇಕಿದೆ.
ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಪದಕ ಗೆಲ್ಲದೇ 22 ವರ್ಷ ಕಳೆದಿದೆ. ಪುಲೇಲಾ ಗೋಪಿಚಂದ್ (2001), ದಂತಕತೆ ಪ್ರಕಾಶ್ ಪಡುಕೋಣೆ (1980)ಪದಕ ಗೆದ್ದಿದ್ದರು.
ಕಳೆದ ಆವೃತ್ತಿಯಲ್ಲಿ ಲಕ್ಷ್ಯ ಸೇನ್ ಫೈನಲ್ ತಲುಪಿದ್ದರು. 2015ರ ಆವೃತ್ತಿಯಲ್ಲಿ ಸೈನಾ ನೆಹ್ವಾಲ್ ರನ್ನರ್‍ಅಪ್ ಆಗಿದ್ದರು. ಎರಡು ಬಾರಿ ಚಾಂಪಿಯನ್ ಸಿಂಧು ಈ ಟೂರ್ನಿಯಲ್ಲಿ ಈವರೆಗೂ ಸೆಮಿಫೈನಲ್ ತಲುಪಿಲ್ಲ.
ಈ ಬಾರಿ ಲಕ್ಷ್ಯ ಸೇನ್ ಮತ್ತು ಸಿಂಧು ಕಠಿಣ ಸವಾಲು ಎದುರಿಸಲಿದ್ದಾರೆ. ಇತ್ತೀಚೆಗೆ ಮಲೇಷ್ಯಾ ಮತ್ತು ಇಂಡಿಯನ್ ಓಪನ್ ಟೂರ್ನಿಯಲ್ಲಿ ಈ ಇಬ್ಬರು ತಾರೆಯರು ಬೇಗನೆ ಟೂರ್ನಿಯಿಂದ ಹೊರಬಿದ್ದಿದ್ದರು. ಮತ್ತೋರ್ವ ಆಟಗಾರ ಪ್ರಣಯ್ ಸಿಂಗಲ್ಸ್ ವಿಭಾಗದಲ್ಲಿ ಆಡಲಿದ್ದಾರೆ.
ಪುರುಷರ ಡಬಲ್ಸ್‍ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಕಣಕ್ಕಿಳಿಯಲಿದ್ದಾರೆ. ಮತ್ತೊಂದು ಜೋಡಿ ಧ್ರುವ ಕಪಿಲಾ ಮತ್ತು ಅರ್ಜುನ್ ಆಡಲಿದ್ದಾರೆ.
ಮಹಿಳಾ ಡಬಲ್ಸ್‍ನಲ್ಲಿ ಟ್ರೆಸ್ಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್‍ನಲ್ಲಿ ಶಾನ್ ಭಟ್‍ನಗರ್ ಮತ್ತು ತನಿಶಾ ಕ್ರಾಸ್ಟೊ ಜೋಡಿಯಾಗಿ ಆಡಲಿದ್ದಾರೆ.