ತಮಿಳುನಾಡಿನ ಜೆಸ್ವಿನ್ ಆಲ್ಡ್ರಿನ್ ಎಎಫ್ಐ ನ್ಯಾಷನಲ್ ಜಂಪ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಗುರುವಾರ ಪುರುಷರ ಲಾಂಗ್ಜಂಪ್ನಲ್ಲಿ 21 ವರ್ಷದ ಜೆಸ್ವಿನ್ ಆಲ್ಡ್ರಿನ್ 8.42 ಮೀ. ದೂರ ಜಿಗಿದರು. ಕಳೆದ ವರ್ಷ ಕೋಜಿಕೋಡ್ನಲ್ಲಿ ಇವರ ಸಹ ಅಥ್ಲೀಟ್ ಎಂ. ಶ್ರೀಶಂಕರ್ 8.36 ಮೀ. ದೂರ ಜಿಗಿದಿದ್ದು ಈವರೆಗಿನ ದಾಖಲೆಯಾಗಿತ್ತು.
ಆಲ್ಡ್ರಿನ್ ಏಷ್ಯಾನ್ ಒಳಾಂಗಣ ಚಾಂಪಿಯನ್ಶಿಪ್ನಲ್ಲಿ 7.97 ಮೀ. ಜಿಗಿದು ಬೆಳ್ಳಿ ಪದಕ ಗೆದ್ದಿದ್ದರು.
ಕಳೆದ ವರ್ಷ ಕೋಜಿಕೋಡ್ನಲ್ಲಿ 8.37 ಮೀ. ಜಿಗಿದು ಚಿನ್ನ ಗೆದ್ದಿದ್ದರು. ಗಾಳಿ ಇದ್ದಿದ್ದರಿಂದ ಭಾರತ ಅಥ್ಲೆಟಿಕ್ಸ್ ಫೆಡರೇಶನ್ ಇದನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಿರಲಿಲ್ಲ.
8 ಮೀ.ಟರ್ ದಾಟಿ ಆಲ್ಡ್ರಿನ್ ಪ್ರಾಬಲ್ಯ ಮೆರೆದಿದ್ದಾರೆ. ಮೊದಲ ಸುತ್ತಿನಲ್ಲಿ 8.05 ನಂತರ 8.26 ಮೀಟರ ಜಿಗಿದರು.
ಮಹಿಳಾ ವಿಭಾಗದಲ್ಲಿ ಗಾಯತ್ರಿ ಶಿವಕುಮಾರ್ 12.98 ಮೀ. ದೂರ ಜಿಗಿದು ಕೂಟ ದಾಖಲೆ ನಿರ್ಮಿಸಿದರು. ಕಳೆದ ತಿರುವನಂತಪುರಂನಲ್ಲಿ ಅಲೀನಾ 12.68 ಮೀ. ದೂರ ಜಿಗಿದಿದ್ದು ಈವರೆಗಿನ ದಾಖಲೆಯಾಗಿತ್ತು.