ಏಷ್ಯಾನ್ ಕಪ್ ಮಹಿಳಾ ಫುಟ್ ಬಾಲ್ – ಇರಾನ್ ವಿರುದ್ಧ ಡ್ರಾ ಸಾಧಿಸಿ ಭಾರತ ತಂಡ
ಏಷ್ಯನ್ ಕಪ್ ಮಹಿಳಾ ಫುಟ್ ಬಾಲ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಇರಾನ್ ವಿರುದ್ಧ ಗೋಲು ರಹಿತ ಡ್ರಾಗೆ ಸಮಾಧಾನಪಟ್ಟುಕೊಂಡಿತ್ತು.
ಮುಂಬೈ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಗೋಲು ಗಳಿಸುವ ಸಾಕಷ್ಟು ಅವಕಾಶಗಳು ಇದ್ದವು. ಆದ್ರೆ ಅವಕಾಶಗಳನ್ನು ಕೈಚೆಲ್ಲಿಕೊಂಡ ಭಾರತ ಮಹಿಳಾ ತಂಡ ನಿರಾಸೆ ಅನುಭವಿಸಿತ್ತು.
ಅದರಲ್ಲೂ ಪಂದ್ಯದ 76ನೇ ನಿಮಿಷದಲ್ಲಿ ಗೋಲುಗಳಿಸುವ ಚಿನ್ನದಂತಹ ಅವಕಾಶವನ್ನು ಕೈಚೆಲ್ಲಿಕೊಂಡಿತ್ತು. ಈ ನಡುವೆ, ಪಂದ್ಯದ ಆರಂಭದಿಂದಲೂ ಭಾರತ ತಂಡ ಇರಾನ್ ಮೇಲೆ ಪ್ರಾಬಲ್ಯ ಸಾಧಿಸುವಲ್ಲಿ ಸಫಲವಾಯ್ತು. ಆದ್ರೆ ಹೊಂದಾಣಿಕೆಯ ಆಟದ ಕೊರತೆಯಿಂದಾಗಿ ಗೋಲಾಗಿಸುವಲ್ಲಿ ವಿಫಲವಾಯ್ತು.
ಭಾರತ ಮುಂದಿನ ಪಂದ್ಯದಲ್ಲಿ ಚೈನಿಸ್ ಥೈಪೈ ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ.