ಯುಎಇನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸುವುದು ಸುಲಭವಿಲ್ಲ ಅನ್ನುವುದು ಮತ್ತೆ ಸಾಭೀತಾಗಿದೆ. ಟಿ20 ವಿಶ್ವಕಪ್ನ ಗ್ರೂಪ್ 2ರಲ್ಲಿ ಪಾಕಿಸ್ತಾನ ಅಗ್ರಸ್ಥಾನ ಪಡೆದುಕೊಂಡಿದೆ. ಸೂಪರ್ 12ನ ತನ್ನ 2ನೇ ಪಂದ್ಯದಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಸೋತ ನ್ಯೂಜಿಲೆಂಡ್ ಅನ್ನು ಪಾಕಿಸ್ತಾನ ಬ್ಯಾಟಿಂಗ್ಗೆ ಇಳಿಸಿತು. ಡೆರಿಲ್ ಮಿಚೆಲ್ ಮತ್ತು ಮಾರ್ಟಿನ್ ಗಪ್ಟಿಲ್ ಕಿವೀಸ್ಗೆ ಡಿಸೆಂಟ್ ಆರಂಭ ತಂದುಕೊಟ್ರು. ಮಾರ್ಟಿನ್ ಗಪ್ಟಿಲ್ 17 ರನ್ಗಳಿಸಿ ಔಟಾದರು. ಮಿಚೆಲ್ 27 ರನ್ಗಳಿಸಿದರೆ, ವಿಲಿಯಮ್ಸನ್ 25 ರನ್ಗಳಿಸಿದರು. ಡೆವೊನ್ ಕಾನ್ವೆ ಕೂಡೆ 27 ರನ್ಗಳಿಸಿದರು. ಆದರೆ ಸ್ಲಾಗ್ ಓವರುಗಳಲ್ಲಿ ಕಿವೀಸ್ ಬ್ಯಾಟಿಂಗ್ ಕೈಕೊಟ್ಟಿತು. ಹೀಗಾಗಿ ನ್ಯೂಜಿಲೆಂಡ್ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 134 ರನ್ ಗಳಿಸುವಂತಾಯಿತು. ಪಾಕಿಸ್ತಾನದ ಹ್ಯಾರಿಸ್ ರೌಫ್ 4 ವಿಕೆಟ್ ಪಡೆದು ಮಿಂಚಿನ ಪ್ರದರ್ಶನ ನೀಡಿದ್ರು.
ಸುಲಭ ಅನ್ನುವಂತಿದ್ದ ಗುರಿಯನ್ನು ತಲುಪಲು ಪಾಕಿಸ್ತಾನ ಕೂಡ ಪರದಾಡಿತು. ಕಳೆದ ಪಂದ್ಯದ ಹೀರೋ ಬಾಬ್ ಅಜಮ್ ಕೇವಲ 9 ರನ್ ಗಳಿಸಿರು. ಫಕರ್ ಜಮಾನ್ (11), ಮೊಹಮ್ಮದ್ ಹಫೀಜ್ (11) ಮತ್ತು ಇಮಾದ್ ವಾಸಿಂ(11) ರನ್ಗಳಿಸಿ ಔಟಾಗಿದ್ದು ಪಾಕ್ ಆತಂಕಕ್ಕೆ ಕಾರಣವಾಗಿತ್ತು. ಈ ಮಧ್ಯೆ ಮೊಹಮ್ಮದ್ ರಿಜ್ವಾನ್ ಕೂಡ 33 ರನ್ ಗಳಿಸಿ ನಿರ್ಗಮಿಸಿದರು. ಅನುಭವಿ ಶೊಯೆಬ್ ಮಲಿಕ್ ಮತ್ತು ಅಸಿಫ್ ಅಲಿ ಬಿಗ್ ಹಿಟ್ಟಿಂಗ್ ಮೂಲಕ ಒತ್ತಡವನ್ನು ನಿಭಾಯಿಸಿದರು. ಸ್ಲಾಗ್ ಓವರುಗಳಲ್ಲಿ ಅಬ್ಬರದ ಆಟವಾಡಿ ನ್ಯೂಜಿಲೆಂಡ್ ಪ್ಲಾನ್ ಅನ್ನು ಬುಡಮೇಲು ಮಾಡಿದರು. ಆಸೀಫ್ ಅಲಿ ಕೇವಲ 12 ಎಸೆತಗಳಲ್ಲಿ ಅಜೇಯ 27 ರನ್ಗಳಿಸಿದರು. ಮಲಿಕ್ 20 ಎಸೆತಗಳಲ್ಲಿ ಅಜೇಯ 27 ರನ್ ಸಿಡಿಸಿದರು. ಪಾಕಿಸ್ತಾನ 18.4 ಓವರುಗಳಲ್ಲಿ ಗುರಿ ತಲುಪಿ 5 ವಿಕೆಟ್ ಗಳ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಪಾಕಿಸ್ತಾನ ಗ್ರೂಪ್ 2ರಲ್ಲಿ 2 ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.