ಟೀಮ್ ಇಂಡಿಯಾದಲ್ಲಿ ಈಗ ಮುಸುಕಿನ ಗುದ್ದಾಟ ಆರಂಭವಾಗಿರುವುದು ಬಹುತೇಕ ಪಕ್ಕಾ ಆಗಿದೆ. ರವಿಶಾಸ್ತ್ರಿ ಕೋಚ್ ಆಗಿದ್ದಾಗ ವಿರಾಟ್ ಕೊಹ್ಲಿಯೇ ಕಿಂಗ್ ಆಗಿದ್ದರು. ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಕ್ಕಿಳಿದ ಮೇಲೆ ವಿರಾಟ್ ಮಾತು ನಡೆಯುತ್ತಿಲ್ಲ. ಅಷ್ಟೇ ಅಲ್ಲ ಒಂದೋದಾಗೇ ವಿರಾಟ್ ಪವರ್ ಕಡಿಮೆ ಆಗುತ್ತಿದೆ.
ಕುಂಬ್ಳೆಯನ್ನು ಕೆಳಗಿಳಿಸಿದ್ದ ಕಿಂಗ್ ಕೊಹ್ಲಿ..!
ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಆಗಿದ್ದಾಗ ಸಾಕಷ್ಟು ನಿಯಮಗಳನ್ನು ಮಾಡಿದ್ದರು. ಆದರೆ ವಿರಾಟ್ಗೆ ಕುಂಬ್ಳೆ ತಂದಿದ್ದ ನಿಯಮಗಳು ಇಷ್ಟವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದು ವಿರಾಟ್ ಮತ್ಉತ ಕುಂಬ್ಳೆ ನಡುವಿನ ಬಿರುಕಿಗೆ ಕಾರಣವಾಗಿತ್ತು ಅನ್ನುವ ಮಾತಿದೆ. ಆದರೆ ಕುಂಬ್ಳೆ ಕೋಚ್ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಿದ್ದರು. ವಿರಾಟ್ ಮಾತು ಆಗ ಬಿಸಿಸಿಐನಲ್ಲಿ ನಡೆದಿತ್ತು. ಕುಂಬ್ಳೆ ರಾಜಿನಾಮೆಯಿಂದ ವಿರಾಟ್ ಶಕ್ತಿ ಮತ್ತಷ್ಟು ಹೆಚ್ಚಿತ್ತು.
ಶಾಸ್ತ್ರಿ ಜೊತೆಗೆ ಕೊಹ್ಲಿ ತಾಳಮೇಳ…!
ರವಿಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆದ ಮೇಲೆ ವಿರಾಟ್ ಕೊಹ್ಲಿ ಕಂಪ್ಲೀಟ್ ಆಗಿ ಪವರ್ಫುಲ್ ಆಗಿದ್ದರು. ಶಾಸ್ತ್ರಿ ಕೂಡ ವಿರಾಟ್ ಬೆಂಬಲಕ್ಕಿದ್ದರು. ಗೆಲುವಿನ ಮೇಲೆ ಗೆಲುವು, ಐತಿಹಾಸಿಕ ದಾಖಲೆಗಳು ಮತ್ತು ರನ್ ಬೇಟೆ ವಿರಾಟ್ ಶಕ್ತಿಗೆ ಬೆಂಬಲವಾಗಿ ನಿಂತಿತ್ತು. ಆದರೆ ಯಾವಾಗಾ ಶಾಸ್ತ್ರಿ ಕೋಚ್ ಪಟ್ಟದಿಂದ ಕೆಳಕ್ಕಿಳದರೋ ಅಂದಿನಿಂದ ವಿರಾಟ್ ಬೆನ್ನಿಗೆ ಶನಿ ಅಂಟಿಕೊಂಡಿದೆ. ವಿರಾಟ್ ಅಂದುಕೊಂಡಿದ್ದು ಯಾವುದೂ ನಡೆಯುತ್ತಿಲ್ಲ.
ದ್ರಾವಿಡ್ ಕೋಚ್, ರೋಹಿತ್ ಕ್ಯಾಪ್ಟನ್..!
ಟಿ20 ವಿಶ್ವಕಪ್ ಬಳಿಕ ವಿರಾಟ್ ಚುಟುಕು ಕ್ರಿಕೆಟ್ನ ಕ್ಯಾಪ್ಟನ್ಸಿ ಬಿಟ್ಟುಕೊಟ್ಟಿದ್ದರು. ಆದರೆ ಏಕದಿನ ಪಂದ್ಯದಲ್ಲಿ ತಂಡ ಮುನ್ನಡೆಸುವ ಆಸೆ ಹೊಂದಿದ್ದರು. ಆದರೆ ದ್ರಾವಿಡ್ ಮತ್ತು ಬಿಸಿಸಿಐ ನಿರ್ಧಾರ ಬೇರೆಯದ್ದೇ ಆಗಿತ್ತು. ನಿಗದಿತ ಓವರುಗಳ ಕ್ರಿಕೆಟ್ಗೆ ಒಬ್ಬರೇ ನಾಯಕರಿರಬೇಕು ಅನ್ನುವುದು ಬಿಸಿಸಿಐ ವಾದವಾಗಿತ್ತು. ಹೀಗಾಗಿ ವಿರಾಟ್ಗೆ ಕ್ಯಾಪ್ಟನ್ಸಿ ಬಿಡಲು 48 ಗಂಟೆಗಳ ಗಡುವು ನೀಡಿದರೂ ಒನ್ ಡೇ ಕ್ಯಾಪ್ಟನ್ಸಿ ಬಿಟ್ಟಿರಲಿಲ್ಲ. ಕೊನೆಗೆ ಬಿಸಿಸಿಐ ವಿರಾಟ್ ರನ್ನು ಕೇವಲ ಟೆಸ್ಟ್ಗೆ ಮಾತ್ರ ಕ್ಯಾಪ್ಟನ್ ಮಾಡಿ ರೋಹಿತ್ಗೆ ಪಟ್ಟ ಕಟ್ಟಿತು.
ಈ ಬೆಳವಣಿಗೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದನ್ನು ಹೇಳುತ್ತಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಹಿಂದೆ ಇದ್ದ ಬಿರುಕು ಮುಂದುವರೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಒಳಗಿನ ಗುಟ್ಟು ಒಂದೊಂದಾಗೇ ಹೊರಬರುತ್ತಿದೆ.