ಎರಡೂ ತಂಡಗಳ ಶಕ್ತಿ ಅಡಗಿರುವುದು ಬ್ಯಾಟಿಂಗ್ನಲ್ಲಿ ಬಿಗ್ ಹಿಟ್ಟರ್ಗಳಿಗೇನು ಕಡಿಮೆ ಇಲ್ಲ.ಸ್ಪೋಟಕ ಆರಂಭ ಕೊಡಬಲ್ಲ ಓಪನರ್ಸ್, ಸ್ಥಿರತೆ ಕೊಡಬಲ್ಲ ಮಿಡಲ್ ಆರ್ಡರ್ ಜೊತ ಸ್ಪೋಟಕ ಫಿನಿಷ್ ಕೊಡಬಲ್ಲ ಫಿನಿಷರ್ಗಳ ಲೈನ್ ಅಪ್ ಇದೆ. ಬೌಲಿಂಗ್ನಲ್ಲೂ ಸಖತ್ ಶಕ್ತಿ ಅಡಗಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ವಾಂಖೆಡೆಯಲ್ಲಿ ನಡೆಯುವ ಪಂದ್ಯ ಕತೂಹಲ ಕೆರಳಿಸಿದೆ.
ಪಂಜಾಬ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದಿತ್ತು. ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ ಆರಂಭದಲ್ಲೇ ಸಿಡಿಲಬ್ಬರದ ಆಟ ಆಡಿದ್ದರು. ಶಾರೂಖ್ ಖಾನ್ ಮತ್ತುಒಡಿನ್ ಸ್ಮಿತ್ ಸ್ಪೋಟಕ ಫಿನಿಷಿಂಗ್ ಮಾಡಿದ್ದರು. ಲಿವಿಂಗ್ ಸ್ಟೋನ್ ಮತ್ತು ರಾಜ್ ಭಾವಾ ಎಡವಿದರೂ 2ನೇ ಅವಕಾಶ ಪಡೆಯುವುದು ಗ್ಯಾರೆಂಟಿ.
ಇದರ ನಡುವೆ ಪಂಜಾಬ್ ಬೌಲಿಂಗ್ನಲ್ಲಿ ಕೊಂಚ ಸುಧಾರಣೆ ಆಗಬಹುದು ಕಗಿಸೋ ರಬಾಡಾ ಆಗಮಮ 3ನೇ ವಿದೇಶಿ ಆಟಗಾರನಿಗೆ ಅವಕಾಶ ಮಾಡಿಕೊಡಲಿದೆ. ಇವರಿಗಾಗಿ ಹಪ್ರಿತ್ ಬ್ರಾರ್ ಹೊರಗುಳಿಯಬಹುದು. ಉಳಿದಂತೆ ಅರ್ಷದೀಪ್ ಮತ್ತು ರಾಹುಲ್ ಚಹರ್ ಪ್ರಮುಖ ಬೌಲರ್ಗಳಾಗಿ ಕಣಕ್ಕಿಳಿಯಬಹುದು. ಸಂದೀಪ್ ಶರ್ಮಾ ಬದಲಗೆ ಈಶನ್ ಪೊರೆಲ್ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಒಡಿನ್ ಸ್ಮಿತ್ ಮತ್ತು ರಾಜ್ ಭಾವಾ 5ನೇ ಬೌಲರ್ ಸ್ಥಾನ ತುಂಬಬಹುದು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೆಟಲ್ ಆಗಿದೆ. ಸಿಎಸ್ಕೆ ವಿರುದ್ಧ ಮೊದಲ ಪಂದ್ಯವನ್ನು ಗೆದ್ದರೂ 2ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೊನೆಯ ಓವರ್ನಲ್ಲಿ ಪಂದ್ಯ ಕಳೆದುಕೊಂಡಿತ್ತು. ವೆಂಕಟೇಶ್ ಅಯ್ಯರ್ ಮತ್ತು ಅಜಿಂಕ್ಯಾ ರಹಾನೆಯಿಂದ ಸ್ಪೋಟಕ ಆರಂಭದ ನಿರೀಕ್ಷೆ ಇದೆ. ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ ಮಿಂಚಬಹುದು ಅನ್ನುವ ನಂಬಿಕೆ ಇದೆ. ಸ್ಯಾಮ್ ಬಿಲ್ಲಿಂಗ್ಸ್, ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಸ್ಪೋಟಕ ಫಿನಿಷಿಂಗ್ ತಂದು ಕೊಟ್ರೆ ಎದುರಾಳಿ ಕಥೆ ಮುಗಿದಂತೆ. ಉಮೇಶ್ ಯಾದವ್, ಟಿಮ್ ಸೌಥಿ ಆಟ ನಡೆಯುತ್ತಿದೆ. ವರುಣ್ ಚಕ್ರವರ್ತಿ ಲಯ ಕಳೆದುಕೊಂಡಿದ್ದರು ಡೇಂಜರಸ್. ರಹಾನೆಯನ್ನು ಹೊರಗಿಟ್ಟು ಶಿವಂ ಮಾವಿಯನ್ನು ಒಳ ತಂದು ಬೌಲಿಂಗ್ಗೆ ಶಕ್ತಿ ತುಂಬುವ ಚರ್ಚೆಯೂ ಇದೆ. ಹಾಗಾದಲ್ಲಿ ಶೆಲ್ಡನ್ ಜಾಕ್ಸನ್ ಅಥವಾ ಸುನೀಲ್ ನರೈನ್ ಇನ್ನಿಂಗ್ಸ್ ಆರಂಭಿಸಬಹುದು.
ವಾಂಖೆಡೆ ಪಿಚ್ ಬಗ್ಗೆ ಕುತೂಹಲವಿದೆ. ಸ್ವಿಂಗ್ ಬೌಲರ್ಗಳಿಗೆ ಪಿಚ್ನಿಂದ ನೆರವು ಸಿಕ್ಕಿದೆ. ಆದರೆ ಡ್ಯೂ ಫ್ಯಾಕ್ಟರ್ ಮೇಲೆ ಫಲಿತಾಂಶದ ಅವಲಂಬನೆ ಇದೆ ಅನ್ನುವುದರಲ್ಲಿ ಅನುಮಾನವಿಲ್ಲ.