ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸ ಸಿಂಧು ಜರ್ಮನ್ ಓಪನ್ನಿಂದ ಹೊರ ಬಿದ್ದಿದ್ದಾರೆ. ಸಿಂಧು ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಜಾಂಗ್ 21-14, 15-21, 21-14 ಅಂತರದಲ್ಲಿ ಸಿಂಧು ಅವರನ್ನು ಸೋಲಿಸಿದರು.
ಪಂದ್ಯದಲ್ಲಿ ಸಿಂಧು ಉತ್ತಮ ಆರಂಭ ಪಡೆಯಲಿಲ್ಲ. ಮೊದಲ ಸೆಟ್ನಲ್ಲಿ ಹಿನ್ನಡೆ ಅನುಭವಿಸಿದ ಸಿಂಧೂ, ಎರಡನೇ ಸುತ್ತಿನಲ್ಲಿ ತಿರುಗಿಬಿದ್ದರೂ ಮೂರನೇ ಸುತ್ತಿನಲ್ಲಿ ಮತ್ತೆ ಎಡವಿದ್ರು. ಹೀಗಾಗಿ ಪಂದ್ಯವನ್ನು ಸುಲಭವಾಗಿ ಸೋತರು.
ಜರ್ಮನ್ ಓಪನ್ನಲ್ಲಿ ಭಾರತದ ಸವಾಲು ಮುಗಿದಿಲ್ಲ. ಸೈನಾ ನೆಹ್ವಾಲ್, ಎಚ್.ಎಸ್.ಪ್ರಣೋಯ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಕೂಡ ಈ ಟೂರ್ನಿಯಲ್ಲಿದ್ದಾರೆ.