ಟಿ20 ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್ ಬರೆದ ದಾಖಲೆ ನೆನಪಿದೆ ಅಲ್ವಾ..? ಮೊದಲ ಟಿ20 ವಿಶ್ವಕಪ್ನಲ್ಲಿ ಯುವಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬರೆದ ದಾಖಲೆ ಬರೆದಿದ್ದರು. ಯುವಿ ದಾಖಲೆಯನ್ನು ಮುರಿಯುವುದ ಕಷ್ಟದ ಮಾತಾಗಿದ್ದರೂ, ಟಿ20 ಸ್ಪೆಷಲಿಸ್ಟ್ಗಳ ಕಾಲದಲ್ಲಿ ಏನ್ ಬೇಕಾದರೂ ಆಗಬಹುದು ಅನ್ನುವ ನಂಬಿಕೆ ಇದೆ.
ಕ್ರಿಸ್ಗೇಲ್, ಬ್ರೆಂಡನ್ ಮೆಕಲಂ, ರೋಹಿತ್ ಶರ್ಮಾ ಎಲ್ಲರೂ ಯುವಿ ದಾಖಲೆ ಮುರಿಯುವ ಪ್ರಯತ್ನ ಮಾಡಿದ್ದರು. ಆದರೆ ಇಲ್ಲಿ ತನಕ ಆಗಿಲ್ಲ. ಆದರೆ ಈಗ ವೆಸ್ಟ್ಇಂಡೀಸ್ ಆಲ್ರೌಂಡರ್ ಸುನೀಲ್ ನರೈನ್ ಕೂದಲೆಳೆ ಅಂತರದಲ್ಲಿ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ನರೈನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೊಮಿಲ್ಲಾ ವಿಕ್ಟೋರಿಯನ್ಸ್ ಹಾಗೂ ಚಟ್ಟೋಗ್ರಾಮ್ ಚಾಲೆಂಜರ್ಸ್ ನಡುವಣ ಈ ಪಂದ್ಯದಲ್ಲಿ ವಿಕ್ಟೋರಿಯನ್ಸ್ ಪರ ಕಣಕ್ಕಿಳಿದ ಸುನಿಲ್ ನರೈನ್ ಕೇವಲ 16 ಎಸೆತಗಳಲ್ಲಿ 57 ರನ್ ಬಾರಿಸಿ ಅಬ್ಬರಿಸಿದ್ದರು.
ಸುನಿಲ್ ನರೈನ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 6 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ ನರೈನ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
BPL 2022 ಇತಿಹಾಸದಲ್ಲಿ ಸುನಿಲ್ ನರೈನ್ ಅತ್ಯಂತ ವೇಗದ ಅರ್ಧಶತಕ ಗಳಿಸಿದ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದಾಗ್ಯೂ ಯುವರಾಜ್ ಸಿಂಗ್ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. 2007 ರಲ್ಲಿ ಯುವಿ ಟಿ20ಯಲ್ಲಿ 12 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಇದೀಗ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ ಸುನಿಲ್ ನರೈನ್ ಒಂದು ಎಸೆತಗಳ ಅಂತರದಿಂದ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟುವುದನ್ನು ತಪ್ಪಿಸಿಕೊಂಡಿದ್ದಾರೆ.