Team india – ರಿಷಬ್ ಪಂತ್ ಚಾಣಕ್ಯ ನಾಯಕ – ಆವೇಶ್ ಖಾನ್ ಬಣ್ಣನೆ..!
ರಿಷಬ್ ಪಂತ್. 24ರ ಹರೆಯದ ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್.
ನೈಜ ಆಟದ ಮೂಲಕವೇ ಗಮನ ಸೆಳೆಯುತ್ತಿರುವ ರಿಷಬ್ ಪಂತ್ ಗೆ ತಾಳ್ಮೆ ಸ್ವಲ್ಪ ಕಡಿಮೆ. ಕೆಲವೊಂದು ಬಾರಿ ಜವಾಬ್ದಾರಿಯನ್ನು ಮರೆತು ಆಡ್ತಾರೆ. ಹೀಗಾಗಿ ರಿಷಬ್ ತಂಡದ ಗ್ಯಾರಂಟಿ ಆಟಗಾರ ಅಂತ ಹೇಳುವಂಗಿಲ್ಲ.
ಇನ್ನೊಂದೆಡೆ ರಿಷಬ್ ಪಂತ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ನಾಯಕ ಅಂತನೇ ಬಿಂಬಿಸಲಾಗುತ್ತಿದೆ. ಸದ್ಯ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿದ್ದಾರೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಟೀಮ್ ಇಂಡಿಯಾದ ನಾಯಕನಾಗುವ ಎಲ್ಲಾ ಅರ್ಹತೆಗಳಿವೆ. ಆದ್ರೆ ಬದ್ದತೆ, ಜವಾಬ್ದಾರಿಯನ್ನು ಅರಿತುಕೊಂಡು ಆಡಬೇಕಿದೆ.
ಈ ನಡುವೆ ರಿಷಬ್ ಪಂತ್ ಅವರ ನಾಯಕತ್ವದ ಬಗ್ಗೆ ಈಗಾಗಲೇ ಕ್ರಿಕೆಟ್ ಪಂಡಿತರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಐಪಿಎಲ್ ನಲ್ಲಿ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಪ್ಲೆ ಆಫ್ ಗೂ ಪ್ರವೇಶಿಸಿತ್ತು. ಲೀಗ್ ಹಂತದಲ್ಲಿ ಅಗ್ರ ತಂಡವಾಗಿಯೂ ಹೊರಹೊಮ್ಮಿದೆ.
ಅಂದ ಹಾಗೇ ರಿಷಬ್ ಪಂತ್ ಅವರಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಮಾರ್ಗದರ್ಶನವಿದೆ. ಪಾಂಟಿಂಗ್ ಅವರ ಅನುಭವ ಮತ್ತು ನಾಯಕತ್ವದ ಗುಣಗಳನ್ನು ಕಲಿಯುವ ಅವಕಾಶವೂ ಇದೆ. Team india – IPL star Avesha khan hails Rishab Pant as ‘intelligent captain’
ಇನ್ನೊಂದೆಡೆ ರಿಷಬ್ ಪಂತ್ ನಾಯಕತ್ವದ ಬಗ್ಗೆ ಯುವ ವೇಗಿ ಆವೇಶ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಪಂತ್ ಚಾಣಕ್ಯ ನಾಯಕ ಅಂತ ಆವೇಶ್ ಖಾನ್ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ, ಆವೇಶ್ ಖಾನ್ ಮತ್ತು ರಿಷಬ್ ಪಂತ್ ಆಪ್ತ ಸ್ನೇಹಿತರು. 19 ವಯೋಮಿತಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೊತೆಯಾಗಿಯೂ ಆಡಿದ್ದರು. ಜೊತೆಗೆ ರೂಮ್ ಮೆಟ್ ಕೂಡ ಆಗಿದ್ದಾರೆ.
ರಿಷಬ್ ಪಂತ್ ವಿಕೆಟ್ ಹಿಂದುಗಡೆ ನಿಂತುಕೊಂಡು ಪಂದ್ಯದ ಗತಿಯನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಫಿಲ್ಡಿಂಗ್ ಸೆಟ್ಟಿಂಗ್ ಆಗಿರಬಹುದು ಅಥವಾ ಎದುರಾಳಿ ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾನೆ, ಹೇಗೆ ಬೌಲಿಂಗ್ ಮಾಡಬೇಕು ಎಂಬುದನ್ನು ಹೇಳ್ತಾ ಇರ್ತಾನೆ. ಹೀಗಾಗಿ ನಾನು ಆತನ ಜೊತೆಗೆ ಸಂವಹಣ ಮಾಡ್ತಾ ಇರ್ತೆನೆ. ಹಾಗೇ ನಾನು ಯಾವ ರೀತಿ ಬೌಲಿಂಗ್ ಮಾಡುತ್ತೇನೆ ಎಂಬುದನ್ನು ಅವನಿಗೆ ಹೇಳಿದ್ರೆ ಸಾಕು ಅದಕ್ಕೆ ತಕ್ಕಂತೆ ಫೀಲ್ಡಿಂಗ್ ಸೆಟ್ ಮಾಡ್ತಾನೆ. ಇದು ನನಗೆ ತುಂಬಾನೇ ಸಹಾಯವಾಗಿದೆ ಎಂದು ಆವೇಶ್ ಖಾನ್ ಹೇಳ್ತಾರೆ.
ಆವೇಶ್ ಖಾನ್ ಅವರು ಕಳೆದ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದರು. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ರಿಟೇನ್ ಮಾಡಿಕೊಂಡಿಲ್ಲ. ಇದೀಗ ಆವೇಶ್ ಖಾನ್ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಆಯ್ಕೆಯಾಗಿದ್ದಾರೆ.