ಏಷ್ಯಾಕಪ್ (Asia Cup) ಸೋಲಿನ ಬಳಿಕ ಟೀಮ್ ಇಂಡಿಯಾದ (Team India) ಹವಾ ಕೊಂಚ ಕಡಿಮೆಯಾಗಿದೆ. ಆದರೆ ಮತ್ತೆ ಕ್ರಿಕೆಟ್ ಆರಂಭವಾದರೆ ಭರಪೂರ ಸುದ್ದಿಗಳು ಹರಿದಾಡುತ್ತವೆ. ಗೆಲುವಿನ ಬಗ್ಗೆ ದೊಡ್ಡ ಚರ್ಚೆಯಾಗುತ್ತದೆ. ಸೋತರ ಆ ಸೋಲಿಗೆ ಕಾರಣಗಳು ಏನು ಅನ್ನುವುದು ಕೂಡ ಹಾಟ್ ಟಾಪಿಕ್ ಆಗಿರುತ್ತದೆ. ಅಂದಹಾಗೇ ಟೀಮ್ ಇಂಡಿಯಾ ಬೆನ್ನು ಬೆನ್ನಿಗೆ 3 ಸರಣಿಗಳನ್ನು ಆಡಲಿದೆ. ಅದೂ ಕೂಡ ಟಿ20 ವಿಶ್ವಕಪ್ಗೆ (T20 Worldcup) ಮುನ್ನವೇ
ಭಾರತ vs ಆಸ್ಟ್ರೇಲಿಯಾ
ಇದು ಕಂಪೀಟ್ T20 ಸರಣಿಯಾಗಿರಲಿದೆ. ಚುಟುಕು ಕ್ರಿಕೆಟ್ನ ಹಾಲಿ ವಿಶ್ವ ಚಾಂಪಿಯನ್ನರ ಎದುರಿನ ಈ ಹೋರಾಟವನ್ನು ಆಸ್ಟ್ರೇಲಿಯಾದಲ್ಲಿ (Australia) ನಡೆಯುವ ಮುಂದಿನ ಟಿ20 ವಿಶ್ವಕಪ್ಗೆ ಅಂತಿಮ ತಯಾರಿ ಎಂದೇ ಬಿಂಬಿಸಲಾಗುತ್ತಿದೆ. ಈ ಸರಣಿಯ ಆರಂಭ ಮುಂದಿನ ವಾರವೇ ಆಗಲಿದೆ.
★ ಸೆಪ್ಟಂಬರ್ 20- ಮೊಹಾಲಿ
★ ಸೆಪ್ಟಂಬರ್ 23- ನಾಗ್ಪುರ
★ ಸೆಪ್ಟಂಬರ್ 25- ಹೈದ್ರಾಬಾದ್
ಭಾರತ vs ದಕ್ಷಿಣ ಆಫ್ರಿಕಾ (South Africa)
T20 ಮತ್ತು ಏಕದಿನ ಸರಣಿಗಳು ಈ ಎದುರಾಳಿ ವಿರುದ್ಧ ನಡೆಯಲಿದೆ. ಈ ಸರಣಿ ಟಿ20 ವಿಶ್ವಕಪ್ಗೆ ಮುನ್ನ ನಡೆಯುವ ಅಂತಿಮ ಸರಣಿಯಾಗಿರಲಿದೆ. ಹೀಗಾಗಿ ಭಾರತದ ಆಟ ಇಲ್ಲಿ ಹೊಸ ಆಸೆಗಳನ್ನು ಹುಟ್ಟಿಸಬಹುದು.
★ ಸೆಪ್ಟಂಬರ್ 28- ತಿರುವನಂತಪುರ
★ ಅಕ್ಟೋಬರ್ 02- ಗುವಾಹಟಿ
★ ಅಕ್ಟೋಬರ್ 04- ಇಂಧೋರ್
ಏಕದಿನ ಸರಣಿ
★ ಅಕ್ಟೋಬರ್- 06-ಲಖನೌ
★ ಅಕ್ಟೋಬರ್- 09- ರಾಂಚಿ
★ ಅಕ್ಟೋಬರ್- 11 – ದೆಹಲಿ