ಭರ್ಜರಿ ಬ್ಯಾಟಿಂಗ್ ಜೊತೆಗೆ ಆಕ್ರಮಣಕಾರಿ ಬೌಲಿಂಗ್ನಿಂದ ಮಿಂಚಿದ ಪಾಕಿಸ್ತಾನ, ದುರ್ಬಲ Hong Kong ವಿರುದ್ಧ 155 ರನ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ASIA CUP 2022ರ Super Four ಹಂತಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದೆ.
ಶಾರ್ಜಾ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ Pakistan, 20 ಓವರ್ಗಳಲ್ಲಿ 2 ವಿಕೆಟ್ಗೆ 193 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಹಾಂಗ್ಕಾಂಗ್ 10.4 ಓವರ್ಗಳಲ್ಲಿ ಕೇವಲ 38 ರನ್ಗಳಿಗೆ ಆಲೌಟ್ ಆಗುವ ಮೂಲಕ 155 ರನ್ಗಳ ಹೀನಾಯ ಸೋಲು ಕಂಡಿತು. ಆ ಮೂಲಕ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿತು.
ರಿಜ್ವಾನ್-ಝಮಾನ್ ಮಿಂಚು:
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲಿ ಬಾಬರ್ ಆಜ಼ಂ(9) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ರಿಜ್ವಾನ್Rizwan(78*) ಹಾಗೂ ಫಾಖರ್ ಜ಼ಮಾನ್Fakhar Zaman(58) ಭರ್ಜರಿ ಆಟವಾಡಿದರು. ಹಾಂಗ್ಕಾಂಗ್ ತಂಡದ ದುರ್ಬಲ ಬೌಲಿಂಗ್ ದಾಳಿಯ ಮೇಲೆ ಹಿಡಿತ ಸಾಧಿಸಿದ ಈ ಜೋಡಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೇ 2ನೇ ವಿಕೆಟ್ಗೆ 116 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನ ಹೆಚ್ಚಿಸಿದರು. ನಂತರ ಕಣಕ್ಕಿಳಿದ ಖುಷ್ದಿಲ್(35*) ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ 193ಕ್ಕೆ ಏರಿಸಿದರು.
ಬ್ಯಾಟ್ಸ್ಮನ್ಗಳ ಪರೇಡ್:
ಪಾಕಿಸ್ತಾನ ನೀಡಿದ 194 ರನ್ಗಳ ಕಠಿಣ ಟಾರ್ಗೆಟ್ ಚೇಸ್ ಮಾಡಲು ಆರಂಭಿಸಿದ Hong Kong ಬ್ಯಾಟಿಂಗ್ ವೈಫಲ್ಯ ಕಂಡಿತು. ಪಾಕಿಸ್ತಾನದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಂಗ್ಕಾಂಗ್ ತಂಡದ ಬ್ಯಾಟ್ಸ್ಮನ್ಗಳು, ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಪಾಕ್ ತಂಡದ ಶದಾಬ್ ಖಾನ್(8/4) ಹಾಗೂ ನವಾಜ್(5/3) ಬೌಲಿಂಗ್ ದಾಳಿಗೆ ಸಿಲುಕಿದ ಹಾಂಗ್ಕಾಂಗ್ 38 ರನ್ಗಳಿಗೆ ಸರ್ವಪತನ ಕಂಡಿತು. ತಂಡದ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕ್ಕಿಯ ಮೊತ್ತ ಕಲೆಹಾಕಲಿಲ್ಲ. ನಾಯಕ ನಿಜಾ಼ಕತ್ ಖಾನ್ ರನ್ಗಳಿಸಿದ 8 ರನ್ Hong Kong ತಂಡದ ಪರ ಗರಿಷ್ಠ ಸ್ಕೋರ್ ಆಯಿತು.