ಸಚಿನ್ ತೆಂಡುಲ್ಕರ್ (Sachin Tendulkar) ಮತ್ತೆ ಕ್ರಿಕೆಟ್ ಆಡ್ತಾರೆ. ಈ ಗುಡ್ನ್ಯೂಸ್ ಕೇಳಿದರೆನೇ ರೋಮಾಂಚನವಾಗುತ್ತದೆ. ಆದರೆ ರಿಯಲ್ ಆಗಿ ಸಚಿನ್ ಆಟಕ್ಕಿಳಿದರೆ ಹೇಗಿರುತ್ತದೆ? ಯಸ್, ಸಚಿನ್ ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಬ್ಯಾಟ್ ಹಿಡಿದು, ಪ್ಯಾಡ್ ಕಟ್ಟಿಕೊಂಡು ಆಡಲಿದ್ದಾರೆ. ಅದು ಕೂಡ ಇದೇ ತಿಂಗಳಲ್ಲಿ ಸಚಿನ್ ಆಡುತ್ತಿದ್ದಾರೆ. ಸಚಿನ್ ಜೊತೆಗೆ ಯುವರಾಜ್ ಸಿಂಗ್ (Yuvraj Singh), ವೀರೇಂದ್ರ ಸೆಹ್ವಾಗ್ (Virendra Sehwag), ಜಹೀರ್ ಖಾನ್ (Zaheer Khan) ರಂತಹ ಲೆಜೆಂಡ್ಗಳು ಕೂಡ ಕಣಕ್ಕಿಳಿಯಲಿದ್ದಾರೆ.
ಮಾಜಿ ಕ್ರಿಕೆಟಿಗರನ್ನು ಒಳಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನಲ್ಲಿ (Road Safety World Series) ಈ ಎಲ್ಲಾ ಆಟಗಾರರು ಆಡಲಿದ್ದಾರೆ. ಇದು ಟಿ20 ಸರಣಿಯ 2 ನೇ ಸೀಸನ್ ಆಗಿರಲಿದೆ. ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 1 ರವರೆಗೆ ಈ ಟೂರ್ನಿ ನಡೆಯಲಿದೆ. ಕಾನ್ಪುರ, ರಾಯ್ಪುರ, ಇಂದೋರ್ & ಡೆಹ್ರಾಡೂನ್ನಲ್ಲಿ ಪಂದ್ಯಗಳು ನಡೆಯಲಿವೆ.
ಲೆಜೆಂಡ್ಸ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರೊಫೆಷನಲ್ ಲೀಗ್ಗಳಿಂದ ನಿವೃತ್ತಿಯಾಗಿರುವ ಆಟಗಾರರು ಮಾತ್ರ ಇದರ ಭಾಗವಾಗಲಿದ್ದಾರೆ. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ಇಂಡೀಸ್ , ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್ & ನ್ಯೂಜಿಲೆಂಡ್ ತಂಡಗಳು ಭಾಗವಹಿಸಲಿವೆ. ಇಂಡಿಯಾ ಲೆಜೆಂಡ್ಸ್ ತಂಡವನ್ನು ಸಚಿನ್ ತೆಂಡುಲ್ಕರ್ ಮುನ್ನಡೆಸಲಿದ್ದಾರೆ.
ಸಚಿನ್ ಮತ್ತೆ ಮೈದಾನಕ್ಕಿಳಿಯುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಕ್ರಿಕೆಟ್ ದೇವರ ಆಟವನ್ನು ನೋಡಲು ಉತ್ಸುಕರಾಗಿದ್ದಾರೆ.