ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ತಂಡದಲ್ಲಿ ಇಲ್ಲ. ಮೊಹಮ್ಮದ್ ಶಮಿ (Mohammad Shami), ಜಸ್ಪ್ರಿತ್ ಬುಮ್ರಾ (Jasprit Bumrah)ರಂತಹ ಟ್ರಂಪ್ ಕಾರ್ಡ್ ಬೌಲರ್ಗಳು ಕೂಡ ಇಲ್ಲ. ರಿಷಬ್ ಪಂತ್ (Rishab Pant),ಹಾರ್ದಿಕ್ ಪಾಂಡ್ಯಾ (Hardik Pandya) ಕೂಡ ತಂಡದಲ್ಲಿಲ್ಲ. ಇಷ್ಟಾದರೂ ಟೀಮ್ ಇಂಡಿಯಾವನ್ನು (Team India) ಸೋಲಿಸುವುದು ಸುಲಭದ ಮಾತಲ್ಲ. ಯಾಕಂದರೆ ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂಗ್ತ್ ಬಲಿಷ್ಠ ತಂಡಗಳನ್ನು ಕೂಡ ಸೋಲಿಸಬಹುದು.
ವೆಸ್ಟ್ಇಂಡೀಸ್ (West Indies) ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲಿ ಮೇಲ್ನೋಟಕ್ಕೆ ಯಾರೂ ಇಲ್ಲ. ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್ (Shikhar Dhawan) ಮಾತ್ರ ಹೆಚ್ಚು ಅನುಭವ ಹೊಂದಿದವರು. ಆದರೆ ಧವನ್ ತಂಡದಲ್ಲಿ ಸ್ಥಿರವಾದ ಸ್ಥಾನ ಪಡೆದಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದ ಆಟಗಾರರನ್ನೇ ತಂಡದಲ್ಲಿ ಸೇರಿಸಿಕೊಂಡು ಅವರ ಬಲ ಪರೀಕ್ಷೆಯನ್ನು ಟೀಮ್ ಇಂಡಿಯಾ ಮಾಡುತ್ತಿದೆ. ಆದರೂ ಈ ತಂಡವನ್ನು ವೆಸ್ಟ್ಇಂಡೀಸ್ ಸೋಲಿಸಲಿಲ್ಲ.
ಟೀಮ್ ಇಂಡಿಯಾ ಬಿ ತಂಡ ಅಥವಾ ಮೇಕ್ ಶಿಫ್ಟ್ ತಂಡ ಅಂದುಕೊಂಡಷ್ಟು ಲೂಸ್ ಟೀಮ್ ಅಲ್ಲ. ದೇಶೀಯ ಕ್ರಿಕೆಟ್ನಲ್ಲಿ ಪ್ರತಿಭೆ ತೋರಿಸಿ, ಐಪಿಎಲ್ನಲ್ಲಿ ಫ್ರಾಂಚೈಸಿಗಳ ಮನ ಗೆದ್ದು, ಅಭಿಮಾನಿಗಳ ಹೃದಯ ಗೆದ್ದ ಆಟಗಾರರೇ ಇವರಾಗಿದ್ದಾರೆ. ಹಂಗಾಮಿ ನಾಯಕ ಧವನ್ಗೆ ಕಂ ಬ್ಯಾಂಕ್ ಇನ್ನಿಂಗ್ಸ್ ಆದರೆ, ಶುಭ್ಮನ್ ಗಿಲ್ಗೆ ಏಕದಿನ ಪಂದ್ಯದಲ್ಲೂ ಪ್ರತಿಭೆ ತೋರಿಸಲು ಅವಕಾಶ ಸಿಕ್ಕ ಪಂದ್ಯವಾಗಿತ್ತು. ಶ್ರೇಯಸ್ ಅಯ್ಯರ್ಗೆ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಲು ಸಿಕ್ಕ ಸೂಕ್ತ ಸರಣಿಯಾಗಿದೆ. ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡರಂತಹ ಆಟಗಾರಿಗೆ ಇದು ತಮ್ಮ ಶಕ್ತಿ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿದೆ.
ರವೀಂದ್ರ ಜಡೇಜಾ ತಂಡದಲ್ಲಿ ಇದ್ದರೂ ಅವಕಾಶ ಪಡೆಯುತ್ತಿರುವ ಅಕ್ಸರ್ಪಟೇಲ್ಗೆ ಆಲ್ರೌಂಡರ್ ಸ್ಥಾನ ಗಟ್ಟಿ ಮಾಡಿಕೊಳ್ಳಲು ಅವಕಾಶ ಸಿಗುತ್ತಿದೆ. ಪಾಂಡ್ಯಾ ಬಳಿಕ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಸ್ಥಾನ ತುಂಬಲು ಶಾರ್ದೂಲ್ ಥಾಕೂರ್ ಪರದಾಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿಧ್ ಕೃಷ್ಣ ತಮ್ಮ ಬೌಲಿಂಗ್ ಅನುಭವಿಗಳು ಇಲ್ಲದಿದ್ದರೂ ಹೇಗಿರುತ್ತೆ ಅನ್ನುವುದನ್ನು ಟೆಸ್ಟ್ ಮಾಡುವ ಸರಣಿ ಇದಾಗಿದೆ.
ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ(ODI Series) ಆಡುವ ಪ್ರತಿಯೊಬ್ಬ ಆಟಗಾರನ ಪ್ರದರ್ಶನದ ಮೇಲೆಯೂ ಕಣ್ಣಿದೆ. ಅವಕಾಶ ಸಿಗಲ್ಲ ಎಂದು ಮರುಗುತ್ತಿದ್ದವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ. ಅದನ್ನು ಬಳಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಸೂಪರ್ ತಂಡವಲ್ಲದಿದ್ದರೂ ಸೋಲಿಸಲು ಸಾಧ್ಯವಿಲ್ಲ, ಬೆಂಚ್ ಸ್ಟ್ರೆಂಗ್ತ್ ತಂಡಕ್ಕೂ ರೋಚಕ ಪಂದ್ಯ ಗೆಲ್ಲಲು ಗೊತ್ತಿದೆ ಅನ್ನುವುದು ಸಾಭೀತಾಗಿದೆ.
Ind VS WI ಕೆರಿಬಿಯನ್ ನೆಲದಲ್ಲಿ ಟೀಮ್ ಇಂಡಿಯಾದ ಕರಾಮತ್ತು