70 ಶತಕಗಳಿಗೆ ಅಂಟಿಕೊಂಡಿದ್ದಾರೆ ವಿರಾಟ್ ಕೊಹ್ಲಿ..! Virat Kohli sportskarnataka
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ, ವಿಶ್ವ ಕ್ರಿಕೆಟ್ ನ ರನ್ ಮಿಷನ್ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಸೆಂಚೂರಿ ಬರ ಎದುರಿಸುತ್ತಿದ್ದಾರೆ.
ಬಹುಶಃ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಸೆಂಚೂರಿ ಬಾರಿಸದೇ ಎರಡು ವರ್ಷ ಕಳೆದದ್ದು ಇದೇ ಮೊದಲ ಅನಿಸುತ್ತದೆ.
ಸದ್ಯ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಕಳೆದುಕೊಂಡಿರುವ ಟೆಸ್ಟ್ ತಂಡದ ನಾಯಕತ್ವಕ್ಕೆ ಸೀಮಿತವಾಗಿದ್ದಾರೆ.
ಅಲ್ಲದೇ ವಿರಾಟ್ ಗೆ ರೋಹಿತ್ ಅವರನ್ನ ಡೆಪ್ಯೂಟಿಯಾಗಿ ನೇಮಿಸಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ಬ್ಯಾಡ್ ಪಾರ್ಮ್ ನಲ್ಲಿರುವ ವಿರಾಟ್, ರನ್ ಗಳಿಸಲು ಪರದಾಡಿದರೇ ಅವರನ್ನ ತಂಡದಿಂದ ಹೊರಗಿಟ್ಟು, ರೋಹಿತ್ ಗೆ ನಾಯಕತ್ವ ನೀಡುವ ಸಾಧ್ಯತೆಗಳಿವೆ.
ಈ ಮಧ್ಯೆ ಬ್ಯಾಡ್ ಪಾರ್ಮ್ ನಲ್ಲಿರುವ ವಿರಾಟ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಇವುಗಳಿಗೆ ಉತ್ತರ ಕೊಡಲೇಬೇಕಾದ ಒತ್ತಡದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಈ ಮೊದಲು ಮೈದಾನದಲ್ಲಿ ಸಿಂಹದ ಘರ್ಜಸಿ ಎದುರಾಗಳಿಗಳ ಶಿಕಾರಿ ಆಡುತ್ತಿದ್ದ ವಿರಾಟ್ ಸದ್ಯ ತುಸು ಮಂಕಾಗಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಾಗಲೀ, ಇಂಗ್ಲೆಂಡ್ ಪ್ರವಾಸದಲ್ಲಾಗಲೀ, ನ್ಯೂಜಿಲೆಂಡ್ನಲ್ಲಾಗಲೀ ಕೊಹ್ಲಿ ಬ್ಯಾಟ್ ಆಗಸ ನೋಡಲೇ ಇಲ್ಲ. ವಿರಾಟ್ ಕೊಹ್ಲಿ 70 ಶತಕಗಳಿಗೆ ಅಂಟಿಕೊಂಡಿದ್ದಾರೆ.
ಹೀಗಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ರನ್ ಬರವನ್ನ ನೀಗಿಸಿಕೊಳ್ಳಲು ವಿರಾಟ್ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.
ನೆಟ್ಸ್ ಗಳಲ್ಲಿ ಗಂಟೆಗಟ್ಟಲೇ ಪಾಕ್ಟೀಸ್ ಮಾಡುತ್ತಿದ್ದಾರೆ. ಟೀಂ ಇಂಡಿಯಾದ ಹೆಡ್ ಕೋಚ್, ರಾಹುಲ್ ದ್ರಾವಿಡ್ ಸಲಹೆಗಳನ್ನು ಪಡೆದು ವಿರಾಟ್ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.