ಐಪಿಎಲ್ 15ನೇ ಆವೃತ್ತಿಯ ಲೀಗ್ ಪಂದ್ಯದ ಮೇಲೆ ಕೊರೊನಾ ಕರಿ ನೆರಳು ಕಾಡುತ್ತಿದೆ. ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕೂ ಕೆಲವೆ ಗಂಟೆಗಳ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ನಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ವರದಿಯಾಗಿದೆ. ಬುಧವಾರ ಬೆಳಗ್ಗೆ ನಡೆದ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಲ್ಲಿ ಡೆಲ್ಲಿ ತಂಡದ ವಿದೇಶಿ ಆಟಗಾರ ಪಾಸಿಟಿವ್ ಆಗಿರುವುದು ವರದಿಯಾಗಿದೆ.
ಈಗಾಗಲೇ ಮಿಚೆಲ್ ಮಾರ್ಷ್ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಕೊರೊನಾ ಸೋಂಕು ತಗುಲಿಸಿಕೊಂಡ ವಿದೇಶಿ ಆಟಗಾರರ ಸಂಖ್ಯೆ 2ಕ್ಕೇರಿದೆ. ಇವರ ಜೊತೆಗೆ ಫಿಸಿಯೋ ಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾತ್, ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್ , ಟೀಮ್ ಡಾಕ್ಟರ್ ಆಭಿಜಿತ್ ಸೆಲ್ವಿ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್ ಟೀಮ್ ಮೆಂಬರ್ ಆಕಾಶ್ ಮಾನೆ ಕೋವಿಡ್ ಪಾಸಿಟಿವ್ ಆಗಿದ್ದಾರೆ.
ಡೆಲ್ಲಿ ಕ್ಯಾಂಪ್ ನಲ್ಲಿ ಕೊರೊನಾ ಭೀತಿ ಹೆಚ್ಚಾಗಿರುವುದರಿಂದ ಪುಣೆಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಆದರೆ ಈಗ ಡೆಲ್ಲಿ ಕ್ಯಾಂಪ್ ನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿರುವುದರಿಂದ ಪಂದ್ಯ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಈ ಪಂದ್ಯ ನಡೆಯದೇ ಇದ್ದರೆ ಟೆಕ್ನಿಕಲ್ ಕಮಿಟಿ ರಿ ಶೆಡ್ಯೂಲ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.