36th National games- ಕರ್ನಾಟಕದ ಮೂವರು ಸ್ಕೇಟರ್ ಗಳಿಗೆ ಪದಕ ಗೆದ್ದ ಸಂಭ್ರಮ..!

ಗುಜರಾತ್ ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಕೇಟರ್ ಗಳು ಪದಕದ ನಗೆ ಬೀರಿದ್ದಾರೆ.
ಅಂದ ಹಾಗೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಇದೇ ಮೊದಲ ಬಾರಿ ಸೇರಿಸಿಕೊಳ್ಳಲಾಗಿದೆ. ಚೊಚ್ಚಲ ಬಾರಿಯ ಸ್ಪರ್ಧೆಯದಲ್ಲಿ ಕರ್ನಾಟಕದ ಮೂವರು ಸ್ಲೇಟರ್ ಗಳು ಪದಕ ಗೆದ್ದುಕೊಂಡಿದ್ದಾರೆ.

ಆರ್ಟಿಸ್ಟಿಕ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಮಹಿನ್ ಟಂಡನ್ ಅವರು ಚಿನ್ನದ ನಗೆ ಬೀರಿದ್ದಾರೆ. ಅದೇ ರೀತಿ ಕಿರಣ್ ಕುಮಾರ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇನ್ನು ಸುವರ್ನಿಕ ಕೂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.