ಟಿ-20 ವಿಶ್ವಕಪ್ – ಮೆಲ್ಬರ್ನ್ ಅಂಗಣ.. ಅಕ್ಟೋಬರ್ 23.. ಇಂಡೋ ಪಾಕ್ ಫೈಟ್
2022ರ ಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ.
ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿರುವ 2022ರ ವಿಶ್ವಕಪ್ ಟೂರ್ನಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ನಡೆಯಲಿದೆ. ಒಟ್ಟು 16 ತಂಡಗಳು ಭಾಗವಹಿಸಲಿವೆ. ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬರ್ನ್, ಪರ್ತ್ ಅಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 45 ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನಮಿಬಿಯಾ ತಂಡಗಳು ಮುಖಾಮುಖಿಯಾಗಲಿವೆ. ಸೂಪರ್ 12 ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಅಕ್ಟೋಬರ್ 16ರಂದು ಶ್ರೀಲಂಕಾ ಮತ್ತು ನಮಿಬಿಯಾ ತಂಡಗಳು ಹೋರಾಟ ನಡೆಸಲಿವೆ.
ಬಿ ಬಣದಲ್ಲಿರುವ ಟೀಮ್ ಇಂಡಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಗ್ರೂಪ್ ಎ ರನ್ನರ್ ಮತ್ತು ಗ್ರೂಪ್ ಬಿ ವಿನ್ನರ್ ತಂಡಗಳ ಜೊತೆಗೆ ಲೀಗ್ ನಲ್ಲಿ ಹೋರಾಟ ನಡೆಸಲಿವೆ.
ಹಾಗೇ ಎ ಬಣದಲ್ಲಿರುವ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಅಫಘಾನಿಸ್ತಾನ ಮತ್ತು ಗ್ರೂಪ್ ಎ ವಿನ್ನರ್ ಮತ್ತು ಗ್ರೂಪ್ ಬಿ ರನ್ನರ್ ಅಪ್ ತಂಡ ಸೇರಿಕೊಳ್ಳಲಿವೆ.
ಅಂದ ಹಾಗೇ 2022ರ ಟಿ-20 ವಿಶ್ವಕಪ್ ನಲ್ಲೂ ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ. ಅಕ್ಟೋಬರ್ 23ರಂದು ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮೆಲ್ಬರ್ನ್ ಅಂಗಣದಲ್ಲಿ ನಡೆಯಲಿದೆ.
ಇನ್ನೊಂದೆಡೆ ಅತಿಥೇಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅಕ್ಟೋಬರ್ 22ರಂದು ಕಾದಾಟ ನಡೆಸಲಿವೆ.