ಬೆಂಗಳೂರು: ಪ್ರಾಂಜಲಾ ಯಡ್ಲಪಲ್ಲಿ ಮತ್ತು ಸೌಜನ್ಯ ಬಾವಿಶೆಟ್ಟಿ ಅವರು ಇಲ್ಲಿ ನಡೆದಿರುವ ಐಟಿಎಫ್ ಅಂತಾರಾಷ್ಟ್ರೀಯ ಟೂರ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಶನಿವಾರ ನಡೆದ ಮಹಿಳೆಯ ಸಿಂಗಲ್ಸ್ ಪಂದ್ಯದಲ್ಲಿ ಸೌಜನ್ಯ ಬಾವಿಶೆಟ್ಟಿ 4-6, 6-4, 6-2 ರಿಂದ ರುತುಜಾ ಭೋಸಲೆ ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಈ ಇಬ್ಬರ ನಡುವೆ ನಡೆದ ಸುಮಾರು ಎರಡು ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಸೌಜನ್ಯ ಸೊಗಸಾದ ಪ್ರದರ್ಶನ ನೀಡಿ ಮನ ಸೆಳೆದರು.
ಈ ಇಬ್ಬರು ಸೆಮಿಫೈನಲ್ಸ್ ಸಿಂಗಲ್ಸ್ ನಲ್ಲಿ ಎದುರಾರದ ಸ್ಟಾರ್ ಆಟಗಾರ್ತಿಯರು ಇದಕ್ಕೂ ಮೊದಲು ಮಹಿಳೆಯರ ಡಬಲ್ಸ್ ನಲ್ಲಿ ಜೋಡಿಯಾಗಿ ಆಡಿದ್ದರು. ಅಲ್ಲದೆ ಈ ಜೋಡಿ 6-0, 6-3 ರಿಂದ ವೈದೇಹಿ ಚೌಧರಿ/ಮಿಹಿಕಾ ಯಾದವ್ ಅವರನ್ನು ಮಣಿಸಿ ಪ್ರಶಸ್ತಿ ಪಡೆದು ಬೀಗಿದ್ದಾರೆ.
ಸೌಜನ್ಯ ಮೊದಲ ಸೆಟ್ ನಲ್ಲಿ ಸೋಲು ಕಂಡರೂ, ಎರಡನೇ ಸುತ್ತಿನಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಮೂರನೇ ಹಾಗೂ ನಿರ್ಣಾಯಕ ಸೆಟ್ ನಲ್ಲಿ ಸೌಜನ್ಯ ಸ್ಥಿರ ಪ್ರದರ್ಶನ ನೀಡಿದ ಸೌಜನ್ಯ ಜಯ ಸಾಧಿಸಿ, ಫೈನಲ್ ಗೆ ಪ್ರವೇಶ ಪಡೆದರು.
ಪ್ರಾಂಜಲಾ ಯಡಪಲ್ಲಿ 3-6, 6-3, 7-5 ರಿಂದ ಅರ್ತಾ ಸುತ್ತಿನಿಂದ ಪ್ರಧಾನ ಘಟ್ಟ ಪ್ರವೇಶಿಸಿದ್ದ ಶ್ರೀವಲ್ಲಿ ರಶ್ಮಿಕಾ ಭಮಿಡಿಪತಿ ಅವರನ್ನು ಮಣಿಸಿ ಮುನ್ನಡೆದರು.
ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಪ್ರಾಂಜಲಾ, ಎರಡನೇ ಸೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ಅಲ್ಲದೆ ಅಂಕ ಗಳನ್ನು ಕಲೆ ಹಾಕಿ ಸೆಟ್ ನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಮೂರನೇ ಹಾಗೂ ನಿರ್ಣಾಯಕ ಸೆಟ್ ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಆಟ ಪ್ರದರ್ಶಿಸಿ ಗಮನ ಸೆಳೆದರು. ಪರಿಣಾಮ ಟೈ ಬ್ರೇಕ್ ವರೆಗೂ ನಡೆದ ಪಂದ್ಯದಲ್ಲಿ ಪ್ರಾಂಜಾಲಾ ಜಯ ಸಾಧಿಸಿದರು.