ಲಖನೌ ಸೂಪರ್ ಜೈಂಟ್ಸ್ ನಾಯಕ ಲೋಕೇಶ್ ರಾಹುಲ್ ತಮ್ಮ 100ನೇ ಐಪಿಎಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲು ಬ್ಯಾಟಿಂಗ್ ಗೆ ಇಳಿದ ಲಖನೌ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭ ಮಾಡಿ ಮುಂಬೈ ಇಂಡಿಯನ್ಸ್ ಬೌಲರ್ ಗಳನ್ನು ಡಂಸಿತು. ಅತ್ಯುತ್ತಮ ಇನ್ನಿಂಗ್ಸ್ ಆಡಿರುವ ತಂಡದ ನಾಯಕ ಲೋಕೇಶ್ ರಾಹುಲ್ 56 ಎಸೆತಗಳಲ್ಲಿ ಐಪಿಎಲ್ ವೃತ್ತಿಜೀವನದ ಮೂರನೇ ಶತಕ ದಾಖಲಿಸಿ ಈ ಋತುವಿನ ಮೊದಲ ಶತಕ ದಾಖಲಿಸಿದರು.
ಈ ಋತುವಿನಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಪರ ಜೋಸ್ ಬಟ್ಲರ್ ಶತಕ ಸಿಡಿಸಿದ್ದರು. ಮಿಲ್ಸ್ನ ಓವರ್ನ 5 ನೇ ಎಸೆತದಲ್ಲಿ ಆಫ್ಸೈಡ್ನಲ್ಲಿ ಬೌಂಡರಿ ಹೊಡೆಯುವ ಮೂಲಕ ರಾಹುಲ್ ಐಪಿಎಲ್ 2022 ರಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ ಮೂರನೇ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಶತಕವಾಗಿದೆ.
ನಾಯಕನಾಗಿ ಕೆಎಲ್ ರಾಹುಲ್ ಗಳಿಸಿದ ಎರಡನೇ ಶತಕ ಇದಾಗಿದೆ. ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಈಗ ಅವರು ಬ್ಯಾಟ್ಸ್ಮನ್ ಆಗಿ ಆಡುತ್ತಿದ್ದಾರೆ. ಕೆಎಲ್ ರಾಹುಲ್ ಅವರ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ಗಳು ಸೇರಿದ್ದವು.
ಈ ಶತಕದೊಂದಿಗೆ ರಾಹುಲ್ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 100ನೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಫಾಫ್ ಡು ಪ್ಲೆಸಿಸ್ ಹೆಸರಿನಲ್ಲಿತ್ತು. ಫಾಫ್ ಕೋಲ್ಕತ್ತಾ ವಿರುದ್ಧ 86 ರನ್ ಗಳಿಸಿದವರು. ನಾಯಕ ಕೆಎಲ್ ರಾಹುಲ್ ತಮ್ಮ 100ನೇ ಪಂದ್ಯದಲ್ಲಿ ಅಜೇಯ 103 ರನ್ ಬಾರಿಸಿ ಈ ದಾಖಲೆ ಮಾಡಿದ್ದಾರೆ.