ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಸೀಸನ್ ನಲ್ಲಿ ಒಂದಕ್ಕಿಂತ ಒಂದು ರೋಚಕ ಪಂದ್ಯಗಳು ನಡೆಯುತ್ತಿವೆ. 8 ತಂಡಗಳು ತಮ್ಮ 5-5 ಪಂದ್ಯಗಳನ್ನು ಆಡಿದ್ದು, ಈ ಸಮಯದಲ್ಲಿ ರನ್ ಹೊಳೆ ಹರಿದಿದೆ. ಅಗ್ರಸ್ಥಾನ ಕಾಯ್ದುಕೊಳ್ಳಲು ಬ್ಯಾಟ್ಸ್ಮನ್ಗಳ ನಡುವೆ ಕದನ ನಡೆಯುತ್ತಿದೆ. ಆರೆಂಜ್ ಕ್ಯಾಪ್ ರೇಸ್ನಲ್ಲಿ ಅನೇಕ ದಿಗ್ಗಜರು ಕಾಣಿಸಿಕೊಂಡಿದ್ದಾರೆ. ರಾಜಸ್ಥಾನದ ಜೋಸ್ ಬಟ್ಲರ್ ಅವರ ಬ್ಯಾಟ್ ಆರ್ಭಟಿಸುತ್ತಿದೆ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ಶುಬ್ಮನ್ ಗಿಲ್ ಕೂಡ ಕ್ಯಾಪ್ ನತ್ತ ಚಿತ್ತ ನೆಟ್ಟಿದ್ದಾರೆ.
ಅತಿ ಹೆಚ್ಚು ರನ್ ಗಳಿಸುವ ವಿಚಾರದಲ್ಲಿ ಬಟ್ಲರ್ ಸತತವಾಗಿ ಎಲ್ಲರನ್ನೂ ಹಿಂದಿಕ್ಕಿ ನಂಬರ್ ಒನ್ ಸ್ಥಾನದಲ್ಲಿ ಓಡುತ್ತಿದ್ದಾರೆ. ಗುರುವಾರ, ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 87 ರನ್ ಗಳಿಸಿದ ನಂತರ ಅವರ ಆರೆಂಜ್ ಕ್ಯಾಪ್, ಬಟ್ಲರ್ ಅವರಿಂದ ಕಸಿದುಕೊಂಡರು. ಆದರೆ ಬಿರುಸಿನ ಅರ್ಧಶತಕವನ್ನು ಗಳಿಸಿದ ನಂತರ ಕೆಲವೇ ನಿಮಿಷಗಳಲ್ಲಿ ಅದನ್ನು ಬಟ್ಲರ್ ಮರಳಿ ಪಡೆದರು. 5 ಪಂದ್ಯಗಳ ನಂತರ, ಅವರು 2 ಅರ್ಧ ಶತಕ ಮತ್ತು 1 ಶತಕದ ಆಧಾರದ ಮೇಲೆ 272 ರನ್ ಗಳಿಸಿದ್ದಾರೆ. ಎರಡನೇ ಕ್ರಮಾಂಕದಲ್ಲಿ 5 ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿರುವ ಹಾರ್ದಿಕ್ 228 ರನ್ ಗಳಿಸಿದ್ದಾರೆ.
ಇನ್ನು ಇದೇ ಪಂದ್ಯದ ವೇಳೆ ಕ್ರೀಡಾ ಸ್ಪೂರ್ತಿ ಮೆರೆಯುವಂತಹ ಸನ್ನಿವೇಶ ನಡೆದಿದೆ. ರಾಜಸ್ಥಾನ ವಿರುದ್ಧ ಬ್ಯಾಟ್ ಮಾಡುತ್ತಿ ಹಾರ್ದಿಕ್ ಟೂರ್ನಿಯ ಗರಿಷ್ಠ ರನ್ ಸಾಧನೆ ಮಾಡಿದರು. ಇವರು ಜೋಸ್ ಬಟ್ಲರ್ ಅವರ ರನ್ ಗಳನ್ನು ಮೀರಿ ನಿಂತರು. ಇದನ್ನು ತಿಳಿದ ಬಟ್ಲರ್ ಬೇರೆ ಯೋಚನೆ ಮಾಡದೆ ಆರೆಂಜ್ ಕ್ಯಾಪ್ ನ್ನು ತಲೆಯ ಮೇಲಿಂದ ತೆಗೆದರು. ಈ ವಿಡಿಯೋ ಸಹ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
Such a gentleman Jos Buttler is .. pic.twitter.com/m42ATqL7tN
— That-Cricket-Girl (@imswatib) April 14, 2022
ರನ್ ಗಳಿಕೆಯ ಲೆಕ್ಕಾಚಾರದಲ್ಲಿ ಚೆನ್ನೈನ ಶಿವಂ ದುಬೆ ಮೂರನೇ ಸ್ಥಾನದಲ್ಲಿದ್ದಾರೆ, ಅವರ ಖಾತೆಯಲ್ಲಿ 5 ಪಂದ್ಯಗಳಲ್ಲಿ 207 ರನ್ ಇವೆ. ಗುಜರಾತ್ನ ಶುಭಮನ್ ಗಿಲ್ 5 ಪಂದ್ಯಗಳ ನಂತರ 200 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಆರಂಭಿಕ ಆಟಗಾರ ಶಿಖರ್ ಧವನ್ ಇದುವರೆಗೆ 5 ಪಂದ್ಯಗಳಲ್ಲಿ 197 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನದ ಶಿಮ್ರಾನ್ ಹೆಟ್ಮೆಯರ್ ಆ5 ಪಂದ್ಯಗಳಲ್ಲಿ 197 ರನ್ ಗಳಿಸಿ 6ನೇ ಸ್ಥಾನದಲ್ಲಿದ್ದಾರೆ.
ಚೆನ್ನೈನ ರಾಬಿನ್ ಉತ್ತಪ್ಪ 194 ರನ್ ಗಳಿಸಿ ಏಳನೇ ಸ್ಥಾನದಲ್ಲಿದ್ದಾರೆ. ಲಕ್ನೋದ ಕ್ವಿಂಟನ್ ಡಿ ಕಾಕ್ ಎಂಟು, ಮುಂಬೈನ ಇಶಾನ್ ಕಿಶನ್ 178 ಒಂಬತ್ತು. ಲಿಯಾಮ್ ಲಿವಿಂಗ್ಸ್ಟೋನ್ 10ನೇ ಸ್ಥಾನದಲ್ಲಿದ್ದಾರೆ.