ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಮುಗಿದಿದೆ. 1-0 ಮುನ್ನಡೆಯಲ್ಲಿದ್ದ ಟೀಮ್ ಇಂಡಿಯಾ, ಕೊನೆಯ ಎರಡು ಪಂದ್ಯಗಳನ್ನು ಸೋತು 2-1ರಿಂದ ಸರಣಿ ಕಳೆದುಕೊಂಡಿದೆ. ಈಗ ಟೆಸ್ಟ್ ಸರಣಿ ಸೋಲನ್ನು ಮರೆಯಲು ಮತ್ತೊಂದು ಅವಕಾಶ ಸಿಕ್ಕಿದೆ. ಏಕದಿನ ಸರಣಿಯಲ್ಲಿ ಅದ್ಭುತ ಆಟವಾಡಿ ವೈಫಲ್ಯವನ್ನು ಮರೆತು ದಕ್ಷಿಣ ಆಫ್ರಿಕಾದಿಂದ ತವರಿಗೆ ಮರಳುವ ಅವಕಾಶವಿದೆ.
ಏಕದಿನ ಸರಣಿಯಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿದೆ. ಕೆ.ಎಲ್. ರಾಹುಲ್ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಉಪ ನಾಯಕನಾಗಿದ್ದಾರೆ.
ಪಾರ್ಲ್ನ ಬೊಲಂಡ್ ಪಾರ್ಕ್ ನಲ್ಲಿ ಸರಣಿಯ ಮೊದಲ ಪಂದ್ಯ ಜನವರಿ 19 ರಂದು ನಡೆಯಲಿದೆ. ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಜನವರಿ 21 ರಂದು ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಮೂರನೇ ಏಕದಿನ ಪಂದ್ಯ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಜನವರಿ 23 ರಂದು ನಡೆಯಲಿದೆ.